ಬೆಳ್ತಂಗಡಿ | ಶಿಬಾಜೆ ರಬ್ಬರ್ ತೋಟದಲ್ಲಿ ಅಕ್ರಮ ಕಸಾಯಿಖಾನೆ | ಪೊಲೀಸ್ ದಾಳಿ, ಓರ್ವ ವಶಕ್ಕೆ, 75 ಕೆಜಿ ಮಾಂಸ ಪತ್ತೆ

ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ತುಂಬೆತ್ತಡ್ಡ ಎಂಬಲ್ಲಿ ರಬ್ಬರ್ ತೋಟದ ನಡುವೆ ನಡೆಯುತ್ತಿದ್ದ ಅಕ್ರಮ ಕಸಾಯಿಖಾನೆಗೆ ಧರ್ಮಸ್ಥಳ ಪೊಲೀಸ್ ದಾಳಿ ನಡೆದಿದೆ.

 

ದಾಳಿಯ ಸಂದರ್ಭ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ವರದಿಯಾಗಿದೆ.

ಶಿಬಾಜೆಯ ಬಜರಂಗದಳದ ಕಾರ್ಯಕರ್ತರ ಖಚಿತ ಮಾಹಿತಿಯ ಮೇರೆಗೆ ಅಲ್ಲಿಗೆ ಪೊಲೀಸರು ಈ ದಾಳಿ ನಡೆಸಿದ್ದರು.

ಈ ಸಂದರ್ಭದಲ್ಲಿ ಆರೋಪಿ ತೋಮಸ್ ಯಾನೆ ಸನ್ನಿ ಎಂಬಾತ ಸುಮಾರು 75 ಕೆಜಿ ಯಷ್ಟು ದನದ ಮಾಂಸ ಮಾರಲು ಕೂತಿದ್ದ. ಆತನನ್ನು ಬಂಧಿಸಿದ ಪೊಲೀಸರು ಅಲ್ಲಿದ್ದ ಮಾಂಸ ಮತ್ತು ಇತರ ಸಾಮಾಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.

ಕೆಲದಿನಗಳಿಂದ ಅಕ್ರಮ ಕಸಾಯಿಖಾನೆ ಚಟುವಟಿಕೆ ಜಾಸ್ತಿ ಆಗಿದ್ದು, ಕೋವಿಡ್ ಮಹಾಮಾರಿ ಕಾಯಿಲೆಯ ಸಂದರ್ಭದಲ್ಲೂ ಅಕ್ರಮ ಮಾಂಸಕ್ಕೆ ಜನ ಮುಗಿಬೀಳುತ್ತಿದ್ದಾರೆ. ಸರ್ಕಾರ ಜಾರಿಗೆ ತಂದ ಗೋಹತ್ಯಾ ನಿಷೇಧ ಕಾಯಿದೆ ಕೊಂಬಿಲ್ಲದ ದನದ ಥರ ಆಗಿದ್ದು, ಅದರಿಂದ ಏನೂ ಉಪಯೋಗ ಇಲ್ಲದ ರೀತಿ ಆಗಿದೆ.

Leave A Reply

Your email address will not be published.