ಇಂಜಿನಿಯರಿಂಗ್ ಪದವೀಧರರಿಗೆ ಬಿಇಎಲ್ ಸಂಸ್ಥೆಯಲ್ಲಿ ವಿವಿಧ ಉದ್ಯೋಗವಕಾಶಗಳು
ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ನಲ್ಲಿನ (ಬಿಇಎಲ್) ಸ್ಟ್ರಾಟೆಜಿಕ್ ಕಮ್ಯುನಿಕೇಷನ್ ಆ್ಯಂಡ್ ಅನ್ ಮ್ಯಾನ್ ಸಿಸ್ಟಮ್ ಎಸ್ಬಿಯು ಕಾಂಪ್ಲೆಕ್ಸ್ನಲ್ಲಿ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಏರೋಸ್ಪೇಸ್, ಏರೋನಾಟಿಕಲ್ ವಿಭಾಗದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.ಒಟ್ಟು 9 ಹುದ್ದೆಗಳ
ನೇಮಕಾತಿ ನಡೆಯಲಿದೆ. ರಕ್ಷಣಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ, ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಬೆಂಗಳೂರಿನ ಬಿಇಎಲ್ನಿಂದ ನೇಮಕ ಮಾಡಿಕೊಳ್ಳುವ ಅಭ್ಯರ್ಥಿಗಳನ್ನು ಬೆಂಗಳೂರಿನಲ್ಲೇ ನೇಮಕ ಮಾಡಲಾಗುವುದು.
9 ಹುದ್ದೆಗಳಲ್ಲಿ ಸಾಮಾನ್ಯವರ್ಗದ ಅಭ್ಯರ್ಥಿಗೆ 3 ಸ್ಥಾನ, ಇತರ ಹಿಂದುಳಿದ ವರ್ಗಕ್ಕೆ 3, ಎಸ್ಸಿ -1, ಎಸ್ಟಿಗೆ 1, ಆರ್ಥಿಕವಾಗಿ ದುರ್ಬಲವಾಗಿರುವ ಅಭ್ಯರ್ಥಿಗಳಿಗೆ 1 ಸ್ಥಾನ ಮೀಸಲಿರಿಸಲಾಗಿದೆ.
ಹುದ್ದೆಗಳ ಮಾಹಿತಿ ಇಂತಿದೆ:
*ಟ್ರೈನಿ ಇಂಜಿನಿಯರ್ ಐ – 6
*ಪ್ರಾಜೆಕ್ಟ್ ಇಂಜಿನಿಯರ್ ಐ – 3
ಅಭ್ಯರ್ಥಿಗಳು ಏರೋಸ್ಪೇಸ್/ ಏರೋನಾಟಿಕಲ್ ಇಂಜಿನಿಯರಿಂಗ್ನಲ್ಲಿ ಬಿಇ, ಬಿ.ಟೆಕ್/ ಬಿಎಸ್ಸಿ/ ಎಂಇ/ ಎಂಟೆಕ್ ಪದವಿ ಪಡೆದಿರಬೇಕು.
ವಯೋಮಿತಿಯು 1.5.2021ಕ್ಕೆ ಅನ್ವಯವಾಗುವಂತೆ ಟ್ರೈನಿ ಇಂಜಿನಿಯರ್ಗೆ ಗರಿಷ್ಠ 25 ವರ್ಷ, ಪ್ರಾಜೆಕ್ಟ್ ಇಂಜಿನಿಯರ್ ಗೆ ಗರಿಷ್ಠ 28 ವರ್ಷ. ಸರ್ಕಾರದ ನಿಯಮದನ್ವಯ ಮೀಸಲಾತಿ ಅಭ್ಯರ್ಥಿಗಳಿಗೆ 3 ರಿಂದ 10 ವರ್ಷ ವಯೋ ಸಡಿಲಿಕೆ ಇದೆ.
ಟ್ರೈನಿ ಇಂಜಿನಿಯರ್ಗೆ ಮೊದಲ ವರ್ಷ ಮಾಸಿಕ 25,000 ರೂ. 2ನೇ ವರ್ಷ ಮಾಸಿಕ 28,000, 3ನೇ ವರ್ಷ 31,000 ರೂ. ವೇತನ ನಿಗದಿಪಡಿಸಲಾಗಿದೆ. ಪ್ರಾಜೆಕ್ಟ್ ಇಂಜಿನಿಯರ್ಗೆ ಮೊದಲ ವರ್ಷ ಮಾಸಿಕ 35,000 ರೂ., 2ನೇ ವರ್ಷ 40,000 ರೂ., 3ನೇ ವರ್ಷ 45,000 ರೂ. ವೇತನ ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ವೃತ್ತಿ ಅನುಭವ ಆಧರಿಸಿ ಸಿದ್ಧಪಡಿಸಲಾದ ಆಯ್ದಪಟ್ಟಿಯಲ್ಲಿನ ಅಭ್ಯರ್ಥಿಗಳನ್ನು ಕೌಶಲ ಪರೀಕ್ಷೆಗೆ ಆಹ್ವಾನಿಸಲಾಗುವುದು. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನದ ದಿನಾಂಕ ಹಾಗೂ ವಿವರಗಳನ್ನು ಮೇಲ್ ಮೂಲಕ ತಿಳಿಸಲಾಗುವುದು.
ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ ಟ್ರೇನಿ ಇಂಜಿನಿಯರ್ ಹುದ್ದೆಗೆ 200 ರೂ., ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ 500 ರೂ. ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 9.6.2021 ಅಧಿಸೂಚನೆಗೆ://./ R: https://bit.ly/3wCc9Pm
Den: https://www.bel-india.in
ಹೆಚ್ಚಿನ ಮಾಹಿತಿಗೆ ಈ ಮೇಲಿನ ಲಿಂಕನ್ನು ಸಂಪರ್ಕಿಸಬಹುದು.