ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅವರ ತೇಜೋವಧೆಗೆ ಯತ್ನ | ಕಠಿಣ ಕ್ರಮಕ್ಕೆ ಆಗ್ರಹ
ಮಂಗಳೂರು: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಅವರು ಯುವತಿ ಜೊತೆಗೆ ವಾಟ್ಸಪ್ ಚಾಟ್ ಮಾಡಿದಂತೆ ನಕಲಿ ಚಾಟ್ ಸೃಷ್ಟಿ ಮಾಡಿ ಅಪಪ್ರಚಾರ ಮಾಡುತ್ತಿರುವುದನ್ನು ವಿಶ್ವ ಹಿಂದೂ ಪರಿಷತ್ ವ್ಯಾಪಕವಾಗಿ ಖಂಡಿಸಿದೆ.
ಯುವತಿ ಜೊತೆಗೆ ಚಾಟ್ ಮಾಡುತ್ತಾ ಆಕೆಯನ್ನು ಲಾಡ್ಜ್ ಗೆ ಕರೆಯುವುದು, ಹಣ ಕೊಡ್ತೇನೆ ಎಂದು ಹೇಳುವುದು, ಅದಕ್ಕೆ ಹುಡುಗಿ ನಿರಾಕರಿಸುವುದು ಈ ಅಪಪ್ರಚಾರದ ಚಾಟ್ ನಲ್ಲಿದ್ದು, ಇದು ಶರಣ್ ಪಂಪ್ ವೆಲ್ ಅವರೆ ಚಾಟ್ ಮಾಡಿದ್ದಾರೆ ಎಂಬಂತೆ ಸೃಷ್ಟಿಸಲಾಗಿದೆ. ಈ ಮೂಲಕ ಶರಣ್ ಪಂಪ್ ವೆಲ್ ಅವರ ತೇಜೋವಧೆಗೆ ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ.
ಶರಣ್ ಪಂಪ್ ವೆಲ್ ಮೇಲೆ ಸುಳ್ಳು ಸುದ್ದಿ ಹರಡಿಸಿ ಅಪಪ್ರಚಾರ ಮಾಡುತ್ತಿರುವುದಕ್ಕೆ ವಿಹಿಂಪ ಖಂಡನೆ ವ್ಯಕ್ತಪಡಿಸಿದ್ದು ತಕ್ಷಣ ಕಠಿಣ ಕ್ರಮಕ್ಕೆ ಕೈಗೊಳ್ಳಲು ಆಗ್ರಹಿಸಿದೆ.
ಶರಣ್ ಪಂಪ್ವೆಲ್ ಅವರ ಮೇಲೆ ಅಪಪ್ರಚಾರ ಇದೇನು ಮೊದಲಲ್ಲ. ಆದರೆ ಈ ಬಾರಿ ಬೇರೆಯೇ ರೀತಿಯಲ್ಲಿ ಅಪಪ್ರಚಾರ ಮಾಡಿದ್ದು ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ.