100 ರೂ. ಗಿಂತಲೂ ಕಡಿಮೆ ದರದ ಈ ಪ್ಲಾನ್ ನಲ್ಲಿ ದೊರೆಯಲಿದೆ 21 ಜಿಬಿ ಡೇಟಾ | ಇದು ಜಿಯೋದ ಕೊಡುಗೆ

ತುಂಬಾ ಅಗ್ಗದ ಬೆಲೆಯಲ್ಲಿ ಡೇಟಾ ಪ್ಲಾನ್ ಸಿಕ್ಕಿದರೆ ಯಾರಾದರೂ ಬಿಡುವುದುಂಟೇ? ಕೊರೊನಾ ಕಾಲದಲ್ಲಿ ನಿಮಗೆ ಮಾರುಕಟ್ಟೆಯಲ್ಲಿ ಹಲವು ರೀತಿಯ ಅಗ್ಗದ ಡೇಟಾ ಪ್ಲಾನ್ ಗಳು ಸಿಗುತ್ತಿವೆ. ಈ ಪ್ಲಾನ್ ಗಳಲ್ಲಿ ಹಲವು ರೀತಿಯ ಬೆನಿಫಿಟ್ ಗಳು ಸಿಗುತ್ತಿವೆ. Jio ಟೆಲಿಕಾಂ ಕಂಪನಿಯ ಅಗ್ಗದ ರಿಚಾರ್ಜ್ ಪ್ಲಾನ್ ಬಗ್ಗೆ ಕೇಳಿದ್ದೀರಾ? ಹಾಗಾದರೆ ಇಲ್ಲಿ ಕೇಳಿ. ಈ ಪ್ಲಾನ್ ಅಲ್ಲಿ ಹಲವು ರೀತಿಯ ಲಾಭಗಳಿವೆ. ರಿಲಯನ್ಸ್ ಮಾಲೀಕತ್ವದ Jio ಕಂಪನಿಯ ರೂ.98ರ ಪ್ಲಾನ್ ನಲ್ಲಿ ಕಂಪನಿ ಹಲವು ಬೆನಿಫಿಟ್ ಗಳನ್ನು ನೀಡುತ್ತಿದೆ.

 

ಅತ್ಯಂತ ಕಡಿಮೆ ಬೆಲೆಯ ಈ ಪ್ಲಾನ್‌ನಲ್ಲಿ (Jio Data
Plan) ನಿಮಗೆ ಹಲವು ಲಾಭಗಳು ಸಿಗುತ್ತಿವೆ. ಈ ಪ್ಲಾನ್ ನ ಗರಿಷ್ಠ ಅವಧಿ 14 ದಿನಗಳು. ಇದರಲ್ಲಿ ಬಳಕೆದಾರರಿಗೆ ನಿತ್ಯ 1.5 ಜಿಬಿ ಡೇಟಾ ಸಿಗುತ್ತಿದೆ. ಅಂದರೆ ಬಳಕೆದಾರರಿಗೆ ಒಟ್ಟು 14 ದಿನಗಳಲ್ಲಿ 21 ಜಿಬಿ ಡೇಟಾ ಸಿಗುತ್ತಿದೆ.

Jio ಕಂಪನಿಯ ರೂ.98ರ ಯೋಜನೆಯ ಕುರಿತು ಹೇಳುವುದಾದರೆ ಇದರಲ್ಲಿ ಬಳಕೆದಾರರಿಗೆ ಡೇಟಾ ಸೇರಿದಂತೆ ಇತರೆ ಲಾಭಗಳು ಕೂಡ ಸಿಗುತ್ತಿವೆ. ಈ ಪ್ಲಾನ್ ಅಡಿ ಬಳಕೆದಾರರು ಯಾವುದೇ ನಂಬರ್ ಗೆ ಉಚಿತ ಕರೆ ಸೌಲಭ್ಯ ಪಡೆಯಲಿದ್ದಾರೆ. ಇದಲ್ಲದೆ ಈ ಪ್ಲಾನ್ ಅಡಿಯಲ್ಲಿ ಬಳಕೆದಾರರಿಗೆ ಉಚಿತ ಜಿಯೋ ಆಪ್ ಬಳಕೆಯ ಅವಕಾಶ ಕೂಡ ಕಲ್ಪಿಸಲಾಗುತ್ತಿದೆ. ಈ ಆಪ್ ಗಳಲ್ಲಿ JioTV, JioCinema, JioNews, JioSecurity ಹಾಗೂ JioCloud ಇತ್ಯಾದಿಗಳು ಶಾಮೀಲಾಗಿವೆ. ಕಳೆದ ವರ್ಷ ಕಂಪನಿ ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಆದರೆ, ಇದೀಗ ಮತ್ತೆ ಈ ಯೋಜನೆಯನ್ನು ಲೈವ್ ಮಾಡಲಾಗಿದೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಜಿಯೋ ಒಂದು ವಿಶೇಷ ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆಯಡಿ, ಒಂದು ರಿಚಾರ್ಜ್ ಮಾಡಿದ ಗ್ರಾಹಕರಿಗೆ ಎರಡನೇ ರಿಚಾರ್ಜ್ (Recharge Plan) ಉಚಿತವಾಗಿ ನೀಡುವುದಾಗಿ ಕಂಪನಿ ಘೋಷಿಸಿತ್ತು. ಕೊರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ವಿಧಿಸಲಾಗಿರುವ ಲಾಕ್ ಡೌನ್ ಅನ್ನು ಗಮನದಲ್ಲಿಟ್ಟುಕೊಂಡು ಕಂಪನಿ ಈ ಪ್ಲಾನ್ ಘೋಷಿಸಿತ್ತು. ಬಳಕೆದಾರರಿಗೆ ರಿಚಾರ್ಜ್ ವಿಷಯದಲ್ಲಿ ಯಾವುದೇ ಅಡೆತಡೆ ಉಂಟಾಗಬಾರದು ಎಂಬುದು ಕಂಪನಿಯ ಇದರ ಹಿಂದಿನ ಉದ್ದೇಶವಾಗಿತ್ತು.

ಇಷ್ಟೆಲ್ಲಾ ಸೌಲಭ್ಯವನ್ನು ನೀಡಿ ಜಿಯೋ, ಕೊರೋನ ಕಾಲದಲ್ಲಿ ದೇಶದ ಜೊತೆಗೆ ನಿಂತಿದೆ. ಎಲ್ಲರೂ ಈ ಸೌಲಭ್ಯದ ಸದುಪಯೋಗ ಮಾಡಿಕೊಂಡರೆ ಉತ್ತಮ.

Leave A Reply

Your email address will not be published.