ಲಸಿಕೆ ಪಡೆಯದ ಸರ್ಕಾರಿ ನೌಕರರಿಗಿಲ್ಲ ಸಂಬಳ | ಏನಿದು ಈ ಸರ್ಕಾರದ ಹೊಸ ನಿಯಮ

ಕೊರೋನಾ ವೈರಸ್‌ನ ಎರಡನೇ ಅಲೆಯ ನಡುವೆ, ಛತ್ತೀಸ್‌ಗಢದ ಬುಡಕಟ್ಟು ಪ್ರದೇಶಕ್ಕೆ ಸರ್ಕಾರವು ಒಂದು ವಿಶಿಷ್ಟ ಘೋಷಣೆ ಮಾಡಿದೆ. ಗೊರೆಲ್ಲಾ ಪೆಂಡ್ರಾ-ಮಾರ್ವಾಹಿ ಜಿಲ್ಲೆಯಲ್ಲಿ ಲಸಿಕೆ ಪಡೆಯದ ಯಾವುದೇ ಅಧಿಕಾರಿ ಅಥವಾ ಉದ್ಯೋಗಿಗೆ ಜೂನ್ ತಿಂಗಳ ಸಂಬಳ ನೀಡಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಆದೇಶವನ್ನು ಬುಡಕಟ್ಟು ಅಭಿವೃದ್ಧಿ ಇಲಾಖೆ (Tribal Development Department) ಹೊರಡಿಸಿದೆ. ಸರ್ಕಾರಿ ನೌಕರರು ಕೋವಿಡ್ ವ್ಯಾಕ್ಸಿನೇಷನ್ ಕಾರ್ಡ್ ನ ಪ್ರತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಾಖಲಾತಿಗಾಗಿ ಸಲ್ಲಿಸಬೇಕಾಗುತ್ತದೆ, ನಂತರ ಅವರ ವೇತನ ಬರುತ್ತದೆ ಎನ್ನಲಾಗಿದೆ.

ಬುಡಕಟ್ಟು ಅಭಿವೃದ್ಧಿ ಇಲಾಖೆ ಸಹಾಯಕ ಆಯುಕ್ತ ಕೆ. ಎಸ್. ಮಸ್ರಾಮ್ ಇನ್ನೂ ಕೂಡ ಕೊರೋನಾ ವ್ಯಾಕ್ಸಿನೇಷನ್ ಪಡೆಯದ ಸರ್ಕಾರಿ ನೌಕರರ ಸಂಬಳವನ್ನು ಜೂನ್ ತಿಂಗಳಲ್ಲಿ ತಡೆಹಿಡಿಯಲಾಗುವುದು. ಇದಕ್ಕೆ ನೌಕರರೇ ಕಾರಣರಾಗಿರುತ್ತಾರೆ. ಈ ಆದೇಶವನ್ನು ತಕ್ಷಣದಿಂದ ಜಾರಿಗೆ ತರಲಾಗಿದೆ ಎಂದು ಹೇಳಿದರು.

ಈ ಆದೇಶದ ಫಲಿತಾಂಶದ ಬಗ್ಗೆ ಎಲ್ಲರೂ ಯೋಚಿಸಬೇಕು. ಶೇಕಡ 90 ಉದ್ಯೋಗಿಗಳಿಗೆ ಈಗಾಗಲೇ ಲಸಿಕೆ ಸಿಕ್ಕಿದೆ. ನಮ್ಮಗುರಿ ಸರ್ಕಾರಿ ನೌಕರರಿಗೆ ಕಿರುಕುಳ ನೀಡುವುದು ಅಥವಾ ಅವರ ಸಂಬಳವನ್ನು ನಿಲ್ಲಿಸುವುದಲ್ಲ. ಕೊರೋನಾ ವಿರುದ್ಧದ ಹೋರಾಟದಲ್ಲಿ ಪ್ರತಿಯೊಬ್ಬರೂ ಲಸಿಕೆ ಪಡೆಯಲಿ ಎಂಬುದು ನಮ್ಮಗುರಿ ಎಂದಿದ್ದಾರೆ.

ಛತ್ತೀಸ್ ಗಢ ರಾಜ್ಯ ಸರ್ಕಾರ ಇಂತಹ ಒಳ್ಳೆಯ ನಿರ್ಧಾರ ತೆಗೆದುಕೊಂಡದ್ದು ಪ್ರಶಂಸನೀಯ. ಈ ನಿಯಮವನ್ನು ಪಾಲಿಸಲು ಹಲವು ರಾಜ್ಯಗಳು ಮುಂದೆ ಬಂದಿವೆ.

Leave A Reply

Your email address will not be published.