ಸುಬ್ರಹ್ಮಣ್ಯ | ಬಿಳಿನೆಲೆಯ ಅಪ್ರಾಪ್ತೆಯನ್ನು ಕರೆದೊಯ್ದ ಕುಲ್ಕುಂದದ ಯುವಕ | ಉತ್ತರ ಕನ್ನಡದಲ್ಲಿ ಪತ್ತೆ ಹಚ್ಚಿದ ಪೊಲೀಸರು | ಪೋಕ್ಸೋ ಕಾಯ್ದೆಯಂತೆ ಯುವಕನ ಬಂಧನ

ಅಪ್ರಾಪ್ತೆಯೊಬ್ಬಳನ್ನು ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಕಾರಣಕ್ಕಾಗಿ ಯುವಕನ ಮೇಲೆ ಕೇಸು ದಾಖಲಿಸಿ ಬಂಧಿಸಿದ ಘಟನೆ ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಹ್ಮಣ್ಯದ ಕುಲ್ಕುಂದದಿಂದ ವರದಿಯಾಗಿದೆ.

 

ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ನಿವಾಸಿ ಪವನ್‌ಕುಮಾರ್ ಎಂಬಾತನೇ ಬಂಧಿತ ಆರೋಪಿ.

ಅಪ್ರಾಪ್ತ ಯುವತಿ ನೆಟ್ಟಣ ಸಮೀಪದ ಬೆಳಿನೆಲೆ ಗ್ರಾಮದವಳಾಗಿದ್ದು, ಪ್ರಸ್ತುತ ಯುವಕನ ಊರಾದ ಕುಲ್ಕುಂದದಲ್ಲಿ ವಾಸವಿದ್ದುದಾಗಿ ಹೇಳಲಾಗಿದೆ.

ಇದ್ದಕ್ಕಿದ್ದಂತೆ ಯುವತಿ ಮೇ.19 ರಂದು ನಾಪತ್ತೆಯಾಗಿದ್ದು ,ಈಕೆ ಪವನ್ ಕುಮಾರ್ ಎಂಬಾತನ ಜತೆ ಸಲುಗೆಯಿಂದಿದ್ದು ಆತನ ಜತೆಗೆ ಹೋಗಿರುವ ಸಂಶಯವಿರುವುದಾಗಿ ಯುವತಿಯ ಪೋಷಕರು ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದರು.

ದೂರು ಸ್ವೀಕರಿಸಿದ ಪೊಲೀಸರು ತನಿಖೆ ನಡೆಸಿದಾಗ ಇಬ್ಬರೂ ಉತ್ತರಕನ್ನಡದ ಕುಮಟಾದಲ್ಲಿರುವುದಾಗಿ ವಿಷಯ ತಿಳಿದು ,ಅಲ್ಲಿಗೆ ತೆರಳಿ ಯುವಕ ಪವನ್ ಕುಮಾರ್ ಮತ್ತು ಯುವತಿಯನ್ನು ಪತ್ತೆಹಚ್ಚಿದ್ದಾರೆ.

ಯುವತಿ ನೀಡಿದ ಹೇಳಿಕೆಯಂತೆ ಯುವಕ ಪವನ್‌ಕುಮಾರ್ ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂದು ತಿಳಿಸಿದ್ದು,ಈ ಕುರಿತಂತೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಪೊಲೀಸರು ಪವನ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಸುಬ್ರಹ್ಮಣ್ಯ ಪೋಲೀಸರು ಆರೋಪಿ ಪವನ್‌ಕುಮಾರ್ ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Leave A Reply

Your email address will not be published.