ಚೆಂಬು | ಮೈಲುತುತ್ತು ಸೇವಿಸಿ ತಾಯಿ ಮಗು ಅಸ್ವಸ್ಥ | ಆಸ್ಪತ್ರೆಗೆ ದಾಖಲು
ಸುಳ್ಯ : ಚೆಂಬು ಗ್ರಾಮದ ಊರುಬೈಲು ಎಂಬಲ್ಲಿ ತಾಯಿ ಮತ್ತು ಮಗು ಮೈಲುತುತ್ತು ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದು,ಚಿಕಿತ್ಸೆಗಾಗಿಆಸ್ಪತ್ರೆ ದಾಖಲಿಸಿದ ಕುರಿತು ಶುಕ್ರವಾರ ವರದಿಯಾಗಿದೆ.
ಪತಿ ಮನೆಯಲ್ಲಿಲ್ಲದ ವೇಳೆ ಪತ್ನಿ ತನ್ನ ಮಗುವಿಗೆ ಮೈಲುತುತ್ತು ನೀಡಿ ತಾನೂ ಸೇವಿಸಿ ಅಸ್ವಸ್ಥರಾದರೆಂದು ಎನ್ನಲಾಗಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಮನೆಯ ಇತರರು ತಕ್ಷಣ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದು ಬಂದಿದೆ.
ಯಾವ ಕಾರಣಕ್ಕಾಗಿ ಮೈಲುತುತ್ತು ಸೇವಿಸಿದ್ದಾರೆಂದು ತಿಳಿದು ಬಂದಿಲ್ಲ ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.