360 ಪ್ರಯಾಣಿಕರ ಜಂಬೋ ವಿಮಾನದಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸಿದ ಪ್ರಯಾಣಿಕ | ಅದಕ್ಕಾಗಿ ಆತ ವ್ಯಯಿಸಿದ್ದು ಕೇವಲ 18000 ರೂಪಾಯಿ !

ವಿಮಾನ ಪ್ರಯಾಣವೇ ಬಲು ರೋಚಕ. ಭೂಮಿಯ ಗುರುತ್ವಾಕರ್ಷಣೆಯನ್ನು ಧಿಕ್ಕರಿಸಿ ಕೊಂಡು ಮೇಲಕ್ಕೆ ಚಿಮ್ಮಿ ತೇಲುತ್ತಾ ವೇಗವಾಗಿ ಸಾಗುವ ವಿಮಾನ ಪ್ರಯಾಣದ ಮತ್ತೊಂದು ರೋಚಕ ಅನುಭವವನ್ನು ಮೇ ಈ ಇಬ್ಬರು ಅದೃಷ್ಟವಂತರು ಇದೇ ಮೇ ತಿಂಗಳಿನಲ್ಲಿ ಪಡೆದಿದ್ದಾರೆ.

ಭವಿಷ್ ಹಾವೇರಿ ಎಂಬ ನಲವತ್ತರ ಪ್ರಾಯದ ಆತ ಮುಂಬೈನಿಂದ ದುಬೈಗೆ 18000 ರೂಪಾಯಿ ಕೊಟ್ಟು ಎಕಾನಮಿ ಕ್ಲಾಸ್ ನಲ್ಲಿ, ಮೇ 19 ರಂದು ಪ್ರಯಾಣಿಸುವುದೆಂದು ಒಂದು ಟಿಕೆಟ್ಟು ಖರೀದಿಸಿದ್ದರು. ಅದು ಲಾಕ್ ಡೌನ್ ನ ಸಂದರ್ಭವಾದುದರಿಂದ ತಮ್ಮ ಎಂದಿನ ಬಿಜಿನೆಸ್ ಕ್ಲಾಸ್ ಟಿಕೆಟ್ ಬೇಡ, ಜಾಸ್ತಿ ರಶ್ ಇರಲ್ಲ ಎಂದು ಎಕಾನಮಿ ಕ್ಲಾಸ್ ಟಿಕೆಟ್ಟು ಕೊಂಡಿದ್ದರು.

ಒಟ್ಟು ಐದೂವರೆ ಗಂಟೆಗಳ ಪ್ರಯಾಣದ ಖರ್ಚು ಸುಮಾರು 70 ಲಕ್ಷ ರೂಪಾಯಿಗಳು. ಅದಕ್ಕಾಗಿ 8 ಲಕ್ಷ ರೂಪಾಯಿಗಳ 15 ಟನ್ ನಷ್ಟು ಪ್ರಮಾಣದ ಇಂಧನವನ್ನು ಸುಮ್ಮನೆ ಉರಿಸಬೇಕಿತ್ತು. ಯಾಕೆಂದರೆ ಅವತ್ತು ಆ ಬೋಯಿಂಗ್ 777 ವಿಮಾನದ ಒಟ್ಟು 360 ಸೀಟುಗಳ ಪೈಕಿ ಆ ದಿನ ಪ್ರಯಾಣ ಮಾಡುತ್ತಿದ್ದುದು ಕೇವಲ ಆತನೊಬ್ಬನೇ !
ಆ ವಿಮಾನದಲ್ಲಿ ತಾವು ಏಕ-ಪ್ರಯಾಣಿಕ ಎಂಬ ವಿಷಯ ತಿಳಿದ ಕೂಡಲೇ ಭಾವೇಶ್ ಭಾವಪರವಶರಾಗಿದ್ದರು.

ಆ ವಿಮಾನದಲ್ಲಿ ಆ ದಿನ ಪ್ರಯಾಣಿಕರ ಆಗಿ ಪ್ರಯಾಣಿಸಿದ್ದು ಆತನೊಬ್ಬನೇ ಆಗಿದ್ದು ಎಲ್ಲಾ ವಿಮಾನಯಾನದ ಗಮನ ಭಾವಿಶ್ ಮೇಲಿತ್ತು. ವಿಮಾನ ಬೋರ್ಡಿಂಗ್ ಆಗುವಾಗ ಟೇಕಾಫ್ ಆಗುವಾಗ ಕೊಡುವ ಎಲ್ಲಾ ಸರ್ವಿಸ್ ಮತ್ತು ಇನ್ಸ್ಟ್ರಕ್ಷನ್ ಗಳು ಭಾವಿಶ್ ಒಬ್ಬರ ನ್ನೇ ಉದ್ದೇಶಿಸಿದ್ದವು. ” ಮಿಸ್ಟರ್ ಭಾವಿಶ್ ಸೀಟ್ ಬೆಲ್ಟ್ ಅನ್ನು ಗಟ್ಟಿಯಾಗಿ ಕಟ್ಟಿಕೊಳ್ಳಿ, ನಾವೀಗ ಟೇಕಾಫ್ ಆಗುತ್ತಿದ್ದೇವೆ; ಮಿಸ್ಟರ್ ಭಾವೀಶ್, ಈಗ ನಾವು ಭೂಮಿಯಿಂದ ಇಂತಿಷ್ಟು ಮೀಟರುಗಳ ಎತ್ತರದಲ್ಲಿ ಇದ್ದೇವೆ. ಇಲ್ಲಿ ಇಷ್ಟು ಉಷ್ಣಾಂಶವಿದೆ. ನಾವು ಮೋಡಗಳ ಮೂಲಕ ಹಾದುಹೋಗುವಾಗ ಟರ್ಬುಲೆನ್ಸ್ ಬರುವುದು ಸಹಜ ಪ್ರತಿಯೊಂದನ್ನು ಹೇಳುವಾಗಲೂ ಭಾವಿಶ್ ಜವೇರಿ ಅವರ ಹೆಸರು ಸಂಬೋಧಿಸಿ ಹೇಳಿ ಆತನನ್ನು ಪುಳಕಿತರನ್ನಾಗಿ ಮಾಡಿತ್ತು ಬೋಯಿಂಗ್ 777 ನ ಏರ್ ಇಂಡಿಯಾ ಸ್ಟಾಫ್. ಒಬ್ಬಂಟಿ ಪ್ರಯಾಣಿಕನಾಗಿ ಅಷ್ಟು ದೊಡ್ಡ ವಿಮಾನದಲ್ಲಿ ಪ್ರಯಾಣಿಸಿದ ಆತನ ಪ್ರಯಾಣದ ಕೊನೆಯ ಉದ್ಘಾರ “ಹಣ ಅನುಭವವನ್ನು ಎಂದಿಗೂ ಕೊಳ್ಳಲಾಗದು” ಎಂದಿತ್ತು.

ಇದೇರೀತಿ, ಓಸ್ವಾಲ್ಡ್ ರೊಡ್ರಿಗಸ್ ಎಂಬ ಪ್ರಯಾಣಿಕ ಕೂಡಾ ಮೇ 22 ರಂದು 256 ಸೀಟುಗಳ ಬೋಯಿಂಗ್ ವಿಮಾನದಲ್ಲಿ ಮುಂಬೈನಿಂದ ದುಬೈಗೆ ಒಬ್ಬಂಟಿಯಾಗಿ ಹೊರಟಿದ್ದರು. 38000 ರೂಪಾಯಿಯ ಬಿಜಿನೆಸ್ ಕ್ಲಾಸ್ ಟಿಕೆಟ್ ಕೊಂಡು ಲೈಫ್ ಟೈಮ್ ಅನುಭವವನ್ನು ಆತ ಪಡೆದಿದ್ದರು. “ಏಕ ಪ್ರಯಾಣಿಕನಾಗಿ ನಾನು ವಿಮಾನದಲ್ಲಿ ಸಾಗುವಾಗ ನನ್ನನ್ನು ರಾಜನಂತೆ ಏರ್ ಇಂಡಿಯಾ ಟ್ರೀಟ್ ಮಾಡಿ ತ್ತು. ನಾನು ಮಹಾರಾಜನಂತೆ ಫೀಲ್ ಆಗಿದ್ದೆ ” ಎಂದು ತನ್ನ ಅನುಭವವನ್ನು ಹಂಚಿಕೊಂಡಿದ್ದರು ರೋಡ್ರಿಗಸ್.

Leave A Reply

Your email address will not be published.