ಅತ್ತೆಯನ್ನು ಕೊಂದು ಗೋಣಿಚೀಲಕ್ಕೆ ತುಂಬಿದ ಸೊಸೆ | ಹೆಣ ಸಾಗಿಸಲು ಪರದಾಡಿ ಜೈಲುಪಾಲಾದರು..!

 

ಪುಣೆ : ಕತ್ತು ಹಿಸುಕಿ ಅತ್ತೆಯನ್ನು ಹತ್ಯೆ ಮಾಡಿದ ಸೊಸೆ ಗಂಡನ ಸಹಾಯದಿಂದ ಶವ ಹೊರಗೆ ಹಾಕಲು ಪರದಾಡುತ್ತಿದ್ದಳು. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದ ಬೆನ್ನಲ್ಲೇ ಆರೋಪಿಗಳನ್ನು ಬಂಧಿಸಿದ ಘಟನೆ ಪುಣೆಯಲ್ಲಿ ನಡೆದಿದೆ.

ಘಟನಾ ವಿವರ:

ಬೇಬಿ ಶಿಂಧೆಯನ್ನು ತನ್ನ ಸೊಸೆಯಾದ ಪೂಜಾ ಶಿಂಧೆಯು ಕತ್ತು ಹಿಸುಕಿ ಹತ್ಯೆ ಮಾಡಿದ್ದಳು. ಇವಳಿಗೆ ಬೇಬಿ ಶಿಂಧೆಯ ಮಗ ಅಂದರೆ ಪೂಜಾಳ ಪತಿ ಸಾಥ್ ನೀಡಿದ್ದ. ಪೂಜಾ ಮತ್ತು ಮಿಲಿಂದ್ ಶವವನ್ನು ಹೊರಹಾಕಲು ಪರದಾಡುತ್ತಿದ್ದರು. ಬಳಿಕ ಗೋಣಿ ಚೀಲದಲ್ಲಿ ಏನನ್ನೋ ಸಾಗಿಸುತ್ತಿರುವುದನ್ನು ಅಕ್ಕ-ಪಕ್ಕದವರು ಕಂಡು ಪೊಲೀಸರಿಗೆ ವರದಿ ಮಾಡಿದ್ದಾರೆ. ಪೊಲೀಸರು ಬಂದು ತನಿಖೆ ನಡೆಸಿದಾಗ ತನ್ನ ಅತ್ತೆಯ ಶವವನ್ನು ಗೋಣಿಯಲ್ಲಿ ತುಂಬಿದ್ದು ಎಂಬ ಸತ್ಯ ಬಯಲಾಗಿದೆ.

ಪುಣೆಯ ಪಿಂಪ್ರಿ ಚಿಂಚ್‌ವಾಡ್ ವ್ಯಾಪ್ತಿಯಲ್ಲಿರುವ ತಲೆಗಾಂವ್ ದಾಭಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತ್ತೆಯನ್ನು ಕೊಂದ ಆರೋಪದ ಮೇಲೆ 22 ವರ್ಷದ ಪೂಜಾ ಮಿಲಿಂದ್ ಶಿಂಧೆಯನ್ನು ಬಂಧಿಸಲಾಗಿದೆ. ಆಕೆಯ ಪತಿ ಹತ್ಯೆಗೀಡಾದವಳ ಪುತ್ರ ಮಿಲಿಂದ್ ಗೌತಮ್ ಶಿಂಧೆಯನ್ನು ಬಂಧಿಸಲಾಗಿದೆ.

Leave A Reply

Your email address will not be published.