ಕೋರೋನಾ ರೋಗಿಗಳಿಗೆ ಸ್ಥೈರ್ಯ ತುಂಬಲು ರಸಮಂಜರಿ ನಡೆಸಿ ಕುಣಿದಿದ್ದ ಈ ಶಾಸಕ ನಿನ್ನೆ ಆಂಬುಲೆನ್ಸ್ ಚಾಲಕರಾಗಿ ಸೋಂಕಿತನ ಶವ ಸಾಗಾಟ
ಕೊರೊನಾ ವಾರಿಯರ್ಸ್ ಗೆ ಊಟ ಉಪಹಾರ ನೀಡಿದ್ದಾಯ್ತು, ನಿರ್ಗತಿಕರಿಗೆ ದಿನಸಿ ಕಿಟ್ ಗಳನ್ನು ವಿತರಿಸಿದ್ದಾಯ್ತು, ಇದೀಗ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಕ್ಷೇತ್ರದ ಶಾಸಕ, ಕಲರ್ ಫುಲ್ ಖದರಿನ ರಾಜಕಾರಣಿ, ಬಿಚ್ಚು ಮಾತಿನ ನೇರ ನುಡಿಯ ಮನುಷ್ಯ ಎಂ ಪಿ ರೇಣುಕಾಚಾರ್ಯ ಅವರು ಬಡವರಿಗಾಗಿ ಅಂಬ್ಯುಲೆನ್ಸ್ ಚಾಲಕರೂ ಕೂಡ ಆಗಿದ್ದಾರೆ.
ಮೊನ್ನೆ ಕೋರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಮೃತ ದೇಹವನ್ನ ಅವರ ಮನೆಗೆ ಕತೆರೆದುಕೊಂಡು ಹೋಗಲು ಬೇರೆ ಅಂಬ್ಯುಲೆನ್ಸ್ ಗಳು ತಕ್ಷಣಕ್ಕೆ ಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಅಲ್ಲಿಯೇ ಇದ್ದ ಶಾಸಕ ರೇಣುಕಾಚಾರ್ಯ ತಾವೇ ಆಂಬುಲೆನ್ಸ್ ನ ಸ್ಟೀರಿಂಗ್ ಹಿಡಿದಿದ್ದಾರೆ. ಅಲ್ಲಿನ ತಾಲೂಕು ಆಸ್ಪತ್ರೆಗೆ ತಾವೇ ಮಂಜೂರು ಮಾಡಿದ್ದ ಅಂಬ್ಯುಲೆನ್ಸ್ ನಲ್ಲಿಯೇ ಕೋವಿಡ್ ನಿಂಡ ಮೃತಪಟ್ಟ ಶವವನ್ನು ಹಾಕಿಕೊಂಡು ತಾವೇ ಅಂಬ್ಯುಲೆನ್ಸ್ ಚಾಲನೆ ಮಾಡಿಕೊಂಡು ಆ ಶವದ ವಾರಸುದಾರರ ಮನೆಗೆ ಬಿಟ್ಟಿದ್ದಾರೆ.
ಅಲ್ಲದೇ, ಮೃತನ ಕುಟುಂಬಕ್ಕೆ ರೇಣುಕಾಚಾರ್ಯ ಅವರು ತಮ್ಮ ಜೇಬಿನಿಂದ 15 ಸಾವಿರ ರೂಪಾಯಿಯನ್ನು ವೈಯಕ್ತಿಕವಾಗಿ ಧನ ಸಹಾಯವನ್ನ ಕೂಡ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದ ವ್ಯಕ್ತಿಯೊಬ್ಬರು ಕೋರೊನಾ ಪಾಸಿಟಿವ್ ನಿಂದಾಗಿ ಹೊನ್ನಾಳಿ ಸರ್ಕಾರಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಆಸ್ಪತ್ರೆಯೆಲ್ಲಿಯೇ ಮೃತಪಟ್ಟಿದ್ದಾರೆ. ಮೃತನ ಶವವನ್ನು ರೇಣುಕಾಚಾರ್ಯ ಅಂಬ್ಯುಲೆನ್ಸ್ ನಲ್ಲಿ ತೆಗೆದುಕೊಂಡು ಸವಳಂಗದವರೆರೂ ತಾವೇ ಚಾಲನೆ ಮಾಡಿಕೊಂಡು ಹೋಗಿ ಬಿಟ್ಟು ಬಂದಿದ್ದಾರೆ. ಅವರ ತಂದೆ ತಾಯಿ ಸ್ಮರಣಾರ್ಥವಾಗಿ ನಿನ್ನೆಯಷ್ಟೆ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಶಾಸಕ ರೇಣುಕಾಚಾರ್ಯ ನಾಲ್ಕು ಅಂಬ್ಯುಲೆನ್ಸ್ ಗಳನ್ನು ಕೊಡುಗೆಯಾಗಿ ನೀಡಿದ್ದರು.
ಸೋಂಕಿತ ವ್ಯಕ್ತಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಶಾಸಕ ಎಂ ಪಿ ರೇಣುಕಾಚಾರ್ಯ ಅವರು ಕಳೆದ ಕೆಲವು ದಿನಗಳಿಂದ ತುಂಬಾ ಮುತುವರ್ಜಿಯಿಂದ ಮಾಡುತ್ತಿದ್ದಾರೆ. ಅವರು ಹೆಚ್ಚಿನ ಸಮಯವನ್ನು ಕೋವಿಡ್ ಆಸ್ಪತ್ರೆಗಳಲ್ಲಿ ಮತ್ತು ಸುತ್ತಮುತ್ತ ಕಳೆಯುತ್ತಿದ್ದಾರೆ. ಎಷ್ಟೋಸಲ ಮಧ್ಯರಾತ್ರಿಯ ಹೊತ್ತು ಆಸ್ಪತ್ರೆಗಳಿಗೆ ಸರ್ಪ್ರೈಸ್ ಚೆಕ್ಕಿಂಗ್ ಹೋಗುತ್ತಿದ್ದಾರೆ.
ಕಳೆದ ವಾರ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಆಸ್ಪತ್ರೆಯೊಂದರ ಮುಂದೆ ರಸ್ತೆಯಲ್ಲಿ ಅವರು ಹೆಜ್ಜೆ ಹಾಕಿದ್ದರು. ಕೋವಿಡ್ ಕೇರ್ ಸೆಂಟರ್ ನಲ್ಲಿ ತಲೆಯಲ್ಲಿ ನೂರೆಂಟು ಸಮಸ್ಯೆಗಳನ್ನು ತುಂಬಿಕೊಂಡು, ಭಯದಿಂದ ಕಾಲ ಕಳೆಯುತ್ತಿದ್ದ 102 ಜನ ಸೋಂಕಿತರ ಎದುರು ಸೋಂಕಿತರಿಗಾಗೀ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಭರ್ಜರಿ ಸ್ಟೆಪ್ ಹಾಕಿದ್ದಾರೆ ರೇಣುಕಾಚಾರ್ಯ.
ಇಷ್ಟೇ ಅಲ್ಲದೆ, ಈ ಮೊದಲು ಬಸವ ಜಯಂತಿಯಂದು ಸೋಂಕಿತರಿಗೆ ಹೋಳಿಗೆ ಊಟ ಮಾಡಿ ಬಡಿಸಿದ್ದರು. ನಂತರ ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದಿದ್ದರು.
ನಿನ್ನೆ ಆಂಬುಲೆನ್ಸ್ ನ ಡ್ರೈವರ್ ಆಗೌವ ಮೂಲಕ ಅಂಬುಲೆನ್ಸ್ ಚಾಲಕರಿಗೆ ಮತ್ತು ಕೋವಿಡ್ ಸೋಂಕಿತರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ.