ಭಾರತೀಯ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ಪರಾರಿ | ಕೊನೆಗೂ ಸೆರೆಸಿಕ್ಕ ಆರೋಪಿ ಮೆಹುಲ್ ಚೋಕ್ಸಿ
ಹೊಸದಿಲ್ಲಿ: ವಜ್ರೋದ್ಯಮಿ ಮೆಹುಲ್ ಚೋಕ್ಸಿಯು ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ ವಂಚಿಸಿದ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿದ್ದು, ಇದೀಗ ಮತ್ತೆ ಬಂಧಿಸಲಾಗಿದೆ.
ಆ್ಯಂಟಿಗುವಾ ಮತ್ತು ಬಾರ್ಬುಡಾ ದಲ್ಲಿದ್ದ ಚೋಕ್ಸಿ ಇತ್ತೀಚೆಗಷ್ಟೇ ಅಲ್ಲಿಂದ ಪರಾರಿಯಾಗಿದ್ದ. ಆತನನ್ನು ಡೊಮಿನಿಕಾ ಪೊಲೀಸರು ಬುಧವಾರ ಬಂಧಿಸಿರುವುದಾಗಿ ಮಾಹಿತಿ ತಿಳಿದುಬಂದಿದೆ. ಆತನ ಗಡಿಪಾರು ವಿಚಾರದಲ್ಲಿ ಭಾರತ ಸರಕಾರದ ಜತೆಗೆ ಸಹಕರಿಸು ವುದಾಗಿ ಆ್ಯಂಟಿಗುವಾ ಮತ್ತು ಬಾರ್ಬುಡಾ ಪ್ರಧಾನಿ ಗ್ಯಾಸ್ಟನ್ ಬ್ರೌನ್ ಭರವಸೆ ನೀಡಿದ್ದಾರೆ.
ಮೆಹುಲ್ ಚೋಕ್ಸಿ ದೇಶದ ಗೌರವಕ್ಕೆ ಧಕ್ಕೆ ತಂದಿದ್ದಾನೆ ಎಂದು ಅವರು ದೂರಿದರು. ಆತ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಆತನ ಪೌರತ್ವ ರದ್ದುಪಡಿಸಲಾಗುತ್ತದೆ ಎಂದಿದ್ದಾರೆ. ಸೋಂಕಿನ ಹಿನ್ನೆಲೆಯಲ್ಲಿ ವಿಮಾನ ಹಾರಾಟ ರದ್ದಾಗಿರುವುದರಿಂದ ಆತ ಬೋಟ್ ಮೂಲಕ ಪರಾರಿಯಾಗಿರುವ ಸಾಧ್ಯತೆಗಳಿವೆ ಎನ್ನಲಾಗಿತ್ತು.
ಮಾಹಿತಿಗಳ ಆಧಾರದ ಮೇಲೆ ಈತ ಭಾರತೀಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸುಮಾರು 9000 ಕೋಟಿ ರೂಪಾಯಿ ವಂಚಿಸಿದ್ದನು. ಇದೀಗ ಈತನ ಬಂಧನವಾಗಿದ್ದು, ಈತನಿಗೆ ಏನು ಶಿಕ್ಷೆ ದೊರೆಯುತ್ತದೆ ಎಂದು ಇನ್ನಷ್ಟೇ ಕಾದುನೋಡಬೇಕಾಗಿದೆ.