ದ.ಕ ಜಿಲ್ಲೆಯ ಮಂಗಳವಾರದ ವರದಿ: ಕೊರೊನಾಗೆ 10 ಬಲಿ; 755 ಮಂದಿಗೆ ಪಾಸಿಟಿವ್

ದ.ಕ. ಜಿಲ್ಲೆಯಲ್ಲಿ ಮಂಗಳವಾರ 10 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 873ಕ್ಕೇರಿದೆ. ಮೃತಪಟ್ಟವರಲ್ಲಿ ಮಂಗಳೂರಿನ 8, ಬಂಟ್ವಾಳ ಮತ್ತು ಪುತ್ತೂರಿನ ತಲಾ ಒಬ್ಬರು ಸೇರಿದ್ದಾರೆ. ಅಲ್ಲದೆ ಮಂಗಳವಾರ ಜಿಲ್ಲೆಯಲ್ಲಿ 755 ಮಂದಿಗೆ ಕೊರೋನ ಸೋಂಕು ದೃಢಪಟ್ಟಿವೆ.

 

ಜಿಲ್ಲೆಯಲ್ಲಿ ಈವರಗೆ 8,32,828 ಮಂದಿಯ ದ್ರವ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 7,61,013 ಮಂದಿಯ ವರದಿ ನೆಗೆಟಿವ್ ಬಂದಿದೆ. ಒಟ್ಟು 71,815 ಮಂದಿ ಕೊರೋನ ಸೋಂಕಿಗೊಳಗಾಗಿದ್ದಾರೆ. ಮಂಗಳವಾರ 933 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆಗೊಳ್ಳುವುದರೊಂದಿಗೆ ಈವರೆಗೆ ಗುಣಮುಖರಾದವರ ಸಂಖ್ಯೆ 60,805ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿ 10,137 ಸಕ್ರಿಯ ಪ್ರಕರಣವಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ದಂಡ ವಸೂಲಿ: ಮಾಸ್ಕ್ ನಿಯಮ ಉಲ್ಲಂಸಿದ 56,671 ಮಂದಿಯಿಂದ 59,17,030 ರೂ. ದಂಡ ವಸೂಲು ಮಾಡಲಾಗಿದೆ.

3 ಕಡೆ ಕಂಟೈನ್ಮೆಂಟ್ ವಲಯ: ಜಿಲ್ಲೆಯ 3 ಕಡೆಗಳಲ್ಲಿ ಮಂಗಳವಾರ ಕಂಟೈನ್ಮೆಂಟ್ ವಲಯವನ್ನಾಗಿ ಘೋಷಣೆ ಮಾಡಲಾಗಿದೆ. ಮಂಗಳೂರು, ಬಂಟ್ವಾಳ ಮತ್ತು ಪುತ್ತೂರು ತಾಲೂಕಿನ ತಲಾ 1 ಕಡೆಗಳಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿ ಘೋಷಣೆ ಮಾಡಲಾಗಿದೆ.

Leave A Reply

Your email address will not be published.