ಬ್ಲಾಕ್ ಫಂಗಸ್ ಅನ್ನು ಬುರ್ಕಾ ಗೆ ಹೋಲಿಸಿದ ಯುವಕ

ಕೋರೋನಾ ಬೆನ್ನಲ್ಲೇ ಬ್ಲಾಕ್ ಫಂಗಸ್ ಕೂಡ ಜನರ ಜೀವ ತೆಗೆಯಲು ಆರಂಭಿಸಿಬಿಟ್ಟಿದೆ. ಇದೀಗ ಬ್ಲಾಕ್ ಫಂಗಸ್ ಅನ್ನು ಯುವಕನೊಬ್ಬ ಬುರ್ಖಾಗೆ ಹೋಲಿಸಿದ್ದಾನೆ. ಬಾಗಲಕೋಟೆಯ ಈ  ಯುವಕ ಬುರ್ಕಾಗೆ ಹೋಲಿಸಿದ್ದು, ಇದು ಮುಸ್ಲಿಮರ ಅಸಮಾಧಾನಕ್ಕೇ ಕಾರಣ ಆಗಿದೆ.

ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲೂಕಿನ ತೇರದಾಳ ಮೂಲದ ಸದಾಶಿವ ಗೋಡಸೆ ಎಂಬ ಯುವಕ ಈ ರೀತಿ ವಿವಾದಾತ್ಮಕ ಪೋಸ್ಟ್ ಮಾಡಿದವನು. ಆತ ಬುರ್ಕಾ ಫೋಟೋವೊಂದನ್ನು ಹಾಕಿ ಬ್ಲಾಕ್ ಫಂಗಸ್ ಅಂದರೆ ಹೀಗಿರುತ್ತೆ ಹುಷಾರ್! ಎಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾನೆ.

ಯುವಕನ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಒಂದು ಪೋಸ್ಟ್‌ನಿಂದ ಒಂದು ಸಮುದಾಯಕ್ಕೆ ಅಸಮಾಧಾನ ಉಂಟಾಗಿದೆ. ಎರಡು ಸಮುದಾಯಗಳ ಮಧ್ಯೆ ವೈಮನಸ್ಸು ಹೆಚ್ಚಾಗುವಂತಾಗಿದೆ. ಆ ಹಿನ್ನೆಲೆಯಲ್ಲಿ ತೇರದಾಳ ಪೊಲೀಸರು ಎರಡೂ ಸಮುದಾಯದವರನ್ನು ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದಾರೆ.

Leave A Reply

Your email address will not be published.