ಕೊರೊನಾಗೆ ಪತಿ ಬಲಿ ಮನನೊಂದು ಪತ್ನಿ ಆತ್ಮಹತ್ಯೆ, 11 ತಿಂಗಳ ಹಿಂದೆ ಮದುವೆಯಾಗಿದ್ದ ಜೋಡಿ

ಪತಿ ಕೊರೊನಾಗೆ ಬಲಿಯಾದ ಹಿನ್ನೆಲೆಯಲ್ಲಿ ಬೇಸತ್ತ ಪತ್ನಿ ನೇಣಿಗೆ ಶರಣಾಗಿರುವ ಘಟನೆ ನಾಗಮಂಗಲ ತಾಲೂಕಿನ ಬೊಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

 

ಬೊಮ್ಮೇನಹಳ್ಳಿಯ ಕಿರಣ್ ಕೊರೊನಾದಿಂದ ಮೃತಪಟ್ಟಿದ್ದು,ಈತನ ಪತ್ನಿ ಪೂಜಾ ನೇಣಿಗೆ ಶರಣಾದ ಮಹಿಳೆ.

ಕೆಲವು ದಿನಗಳಿಂದ ಪತಿ ಕಿರಣ್ ಕೊರೊನಾ ಸೋಂಕಿನಿಂದ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಕಿರಣ್ ಮೃತಪಟ್ಟಿದ್ದರು.

ಅದರಂತೆ ಕೊರೊನಾ ನಿಯಮದಂತೆ ಕಿರಣ್ ಅಂತ್ಯಕ್ರಿಯೆಯನ್ನು ಸ್ವಗ್ರಾಮ ಬೊಮ್ಮೇನಹಳ್ಳಿಯಲ್ಲಿ ಕುಟುಂಬಸ್ಥರು ನೆರವೇರಿಸಿದ್ದರು.

ಅಂತ್ಯಕ್ರಿಯೆ ನಡೆಸಿ ಮನೆಗೆ ಬಂದ ಪೂಜಾ, ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. ಕಳೆದ 11 ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಇಬ್ಬರ ಸಾವಿನಿಂದ ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Leave A Reply

Your email address will not be published.