ಕೋವಿಶೀಲ್ಡ್ 2 ನೇ ಡೋಸ್‍ಗೆ ಮುಂಗಡ ನೋಂದಣಿ ಅಗತ್ಯವಿಲ್ಲ | ಕೊವ್ಯಾಕ್ಸಿನ್ 2 ನೇ ಡೋಸ್‍ಗೆ SMS ಮೂಲಕ ಮಾಹಿತಿ ನೀಡಲಾಗತ್ತೆ

ಕೋವಿಶೀಲ್ಡ್ ಎರಡನೇ ಡೋಸ್ ಲಸಿಕೆಗೆ ಮುಂಗಡ ನೋಂದಣಿ ಅಗತ್ಯವಿಲ್ಲ ಹತ್ತಿರದ ಕೋವಿಡ್-19 ಲಸಿಕಾ ಕೇಂದ್ರಕ್ಕೆ ನೇರವಾಗಿ ತೆರಳಿ ಹಾಕಿಸಿಕೊಳ್ಳಬಹುದು ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ಮಿಷನ್ ಸ್ಪಷ್ಟಪಡಿಸಿದೆ.

ಲಸಿಕಾ ಅಭಿಯಾನದ ಬಗ್ಗೆ ಕೆಲವು ಗೊಂದಲಗಳಿರುವ ಹಿನ್ನೆಲೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಮಿಷನ್ ಪತ್ರಿಕಾ ಪಕಟಣೆ ಮೂಲಕ ಲಸಿಕೆ ಅಭಿಯಾನದ ಬಗ್ಗೆ ಸ್ಪಷ್ಟೀಕರಣ ನೀಡಿದೆ.

ಕೋವಿಶೀಲ್ಡ್

1) 45 ವರ್ಷ ಮೇಲ್ಪಟ್ಟವರು ಕೋವಿಶೀಲ್ಡ್ ಮೊದಲನೇ ಡೋಸ್ ಪಡೆಯಲು ನಗರ ಪ್ರದೇಶಗಳಲ್ಲಿ ಆನ್‍ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.

2) ಗ್ರಾಮೀಣ ಪ್ರದೇಶಗಳಲ್ಲಿ ನೇರ ಲಸಿಕೆ ಹಾಕುವ ಕೇಂದ್ರಕ್ಕೆ ಹೋಗಿ ನೋಂದಣಿ ಮಾಡಿಸಿ ಲಸಿಕೆ ಪಡೆಯಬಹುದು.

3) 45 ವರ್ಷ ಮೇಲ್ಪಟ್ಟವರು ಕೋವಿಶೀಲ್ಡ್ ಎರಡನೇ ಡೋಸ್ ಲಸಿಕೆ ಪಡೆಯಲು ಮುಂಗಡ ನೋಂದಣಿ ಅಗತ್ಯವಿಲ್ಲ. ತಮ್ಮ ಹತ್ತಿರದ ಕೋವಿಡ್-19 ಲಸಿಕಾ ಕೇಂದ್ರಕ್ಕೆ ನೇರವಾಗಿ ತೆರಳಿ ವ್ಯಾಕ್ಸಿನ್ ಹಾಕಿಸಿಕೊಳ್ಳಬಹುದು.

ಕೋವ್ಯಾಕ್ಸಿನ್

4) 45 ವರ್ಷ ಮೇಲ್ಪಟ್ಟವರಿಗೆ ಕೋವ್ಯಾಕ್ಸಿನ್ ಮೊದಲನೇ ಡೋಸ್ ಸದ್ಯಕ್ಕೆ ಲಭ್ಯವಿರುವುದಿಲ್ಲ.

5) 45 ವರ್ಷ ಮೇಲ್ಪಟ್ಟವರಿಗೆ ಕೋವ್ಯಾಕ್ಸಿನ್ ಎರಡನೇ ಡೋಸ್ ಫಲಾನುಭವಿಗಳಿಗೆ ಎಸ್ಎಮ್ಎಸ್ ಕಳುಹಿಸಲಾಗುತ್ತದೆ. ಎಸ್ಎಮ್ಎಸ್ ನಲ್ಲಿ ತಿಳಿಸಲಾದ ಕೋವಿಡ್-19 ಲಸಿಕಾ ಕೇಂದ್ರದಲ್ಲಿ ನಿಗದಿತ ಸಮಯಕ್ಕೆ ಫಲಾನುಭವಿಗಳು ಲಸಿಕೆ ಪಡೆಯಬಹುದು.

6) 18-44 ವಯಸ್ಸಿನ ಜನಸಾಮಾನ್ಯರಿಗೆ ಸದ್ಯಕ್ಕೆ ಲಸಿಕೆ ಲಭ್ಯವಿರುವುದಿಲ್ಲ. ಆದರೆ ರಾಜ್ಯ ಸರ್ಕಾರ ಗುರುತಿಸಿರುವ ಕೋವಿಡ್-19 ಮುಂಚೂಣಿ ಕಾರ್ಯಕರ್ತರಿಗೆ, ದುರ್ಬಲ ಗುಂಪಿನವರಿಗೆ ಮತ್ತು ಆದ್ಯತೆ ಗುಂಪಿನವರಿಗೆ ಲಸಿಕೆ ಹಾಕಲಾಗುತ್ತಿದೆ. ಆಯಾ ಗುಂಪಿನ ನಿಯೋಜಿತ ನೋಡಲ್ ಅಧಿಕಾರಿಗಳು ಲಸಿಕೆ ಹಾಕುವ ದಿನಾಂಕ ಮತ್ತು ಸಮಯದ ಮಾಹಿತಿಯನ್ನು ನೀಡುತ್ತಾರೆ ಎಂದು ಹೇಳಿದೆ.

Leave A Reply

Your email address will not be published.