ಬೆಳ್ತಂಗಡಿ, ಧರ್ಮಸ್ಥಳ | ಹುಡುಗರ ಕ್ರಿಕೆಟ್ ಮತ್ತು ಪೊಲೀಸರ ವಿಕೆಟ್ ಕೀಳುವ ಆಟ ದೂರದ ದಿಲ್ಲಿಯಲ್ಲಿ ವೈರಲ್ ! | 1 ಲಕ್ಷ ದಾಟಿದ ವ್ಯೂಸ್ !!

ಕಳೆದ 2 ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಸಂಜೆ ಕ್ರಿಕೆಟ್ ಟೀಮಿನ ಮೇಲೆ ಪೊಲೀಸರು ರೈಡ್ ಮಾಡಿದ್ದರು.

ಹುಡುಗರು ಸಂಜೆ ಕ್ರಿಕೆಟ್ ಆಡುವಾಗ ಧರ್ಮಸ್ಥಳದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪವನ್ ನಾಯಕ್ ನೇತೃತ್ವದ ಪೊಲೀಸರು ರೈಡ್ ಮಾಡಿ ಅಲ್ಲಿದ್ದ ಹಲವರಿಗೆ ದಂಡ ಹಾಕಿ, ಅಲ್ಲಿದ್ದ ವಾಹನವನ್ನು ಜಪ್ತಿ ಮಾಡಿ ಸ್ಟೇಷನ್ನಿಗೆ ತಂದಿದ್ದರು. ಆ ಸಂದರ್ಭದಲ್ಲಿ ಅಲ್ಲಿದ್ದ ಹುಡುಗರಲ್ಲೊಬ್ಬ ಇದರ ವಿಡಿಯೋ ಮತ್ತು ಫೋಟೋಗಳನ್ನು ತೆಗೆದಿದ್ದರು.

ಆನಂತರ ಆ ವಿಡಿಯೋ ಮತ್ತು ಫೋಟೋ ಎಡಿಟ್ ಮಾಡಿ ಅದಕ್ಕೆ ಮತ್ತೊಂದಷ್ಟು ಸೇರಿಸಿ, ಹಿಂದಿ ಹಾಡಿನ ಸಾಹಿತ್ಯ ಕೂಡಿಸಿ, ಇನ್ಸ್ಟಾಮತ್ತು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದರು.

ಒಟ್ಟಾರೆಯಾಗಿ ಬೆಳ್ತಂಗಡಿ ತಾಲೂಕಿನ ಹುಡುಗರ ಕ್ರಿಕೆಟ್ಟು ಮತ್ತು ವಿಕೆಟ್ ಕೀಳುವ ಧರ್ಮಸ್ಥಳದ ಪೊಲೀಸರ ಮುಸ್ಸಂಜೆಯ ಕೆಲಸ ರಾಷ್ಟ್ರರಾಜಧಾನಿ ದಿಲ್ಲಿಿ ತನಕ ತಲುಪಿದೆ. ನಮ್ಮ ಹುಡುಗರು ಮತ್ತು ಪೊಲೀಸರು ಕ್ರಿಕೆಟ್ ಆಟದ ಮೂಲಕ ಈಗ ದಿಲ್ಲಿಯಲ್ಲಿ ಮಿಂಚುತ್ತಿದ್ದಾರೆ !!?. ಆದರೆ ಈ ವಿಡಿಯೋ ಮತ್ತು ಘಟನೆಯನ್ನು ಅಷ್ಟು ದೂರ ತಲುಪಿಸಿ ಅಲ್ಲಿ ಹರಿಯ ಬಿಟ್ಟು ಓಡುವಂತೆ ಮಾಡಿದವರು ಯಾರು ಎಂಬುದು ಇವತ್ತಿಗೂ ನಿಗೂಢ.

Leave A Reply

Your email address will not be published.