ಸುಳ್ಯ:ಅಪಾರ್ಟ್ಮೆಂಟ್ ಒಂದರಲ್ಲಿ ಕಾಣಿಸಿಕೊಂಡ ಹೊಗೆ…ತುರ್ತು ಅಗ್ನಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ ತಪ್ಪಿತು ಭಾರಿ ಅನಾಹುತ

ಸುಳ್ಯದ ಅಪಾರ್ಟ್ಮೆಂಟ್ ಒಂದರ ನೆಲ ಅಂತಸ್ತಿನಿಂದ ರಾತ್ರಿ ವೇಳೆಯಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಸುಳ್ಯದ ರಾಮ ಬಾರ್ ನ ಹಿಂಬದಿಯ ದೇವಸ್ಯ ಅಪಾರ್ಟ್ಮೆಂಟ್ ನಲ್ಲಿ ವೈದ್ಯರೊಬ್ಬರು ಆಯುರ್ವೇದಿಕ್ ಕ್ಲಿನಿಕ್ ನಡೆಸುತ್ತಿದ್ದು,ಮೇ 20 ರಂದು ಕ್ಲಿನಿಕ್ ಬಂದ್ ಮಾಡಿ ಮನೆಗೆ ತೆರಳಿದ ಬಳಿಕ ರಾತ್ರಿ ವೇಳೆ ಬೆಂಕಿ ಹತ್ತಿದ ರೀತಿಯಲ್ಲಿ ಹೊಗೆ ಬರಲು ಆರಂಭವಾಯಿತು. ಇದನ್ನು ಗಮನಿಸಿದ ಮಹಡಿಯಲ್ಲಿದ್ದ ನಂದರಾಜ್ ಸಂಕೇಶ ರವರು ತಕ್ಷಣ ಅಗ್ನಿಶಾಮಕಕ್ಕೆ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳವು ಹೊಗೆಯನ್ನು ಆರಿಸಿದರು.

ಕ್ಲಿನಿಕ್ ನಲ್ಲಿದ್ದ ರಿಫ್ರೆಜರೇಟರ್ ಒಳಗಿನಿಂದ ಬೆಂಕಿ ಹತ್ತಿಕೊಂಡಿದೆ ಎನ್ನಲಾಗಿದ್ದು, ಅಗ್ನಿಶಾಮಕದವರ ತುರ್ತು ಕಾರ್ಯಾಚರಣೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

Leave A Reply

Your email address will not be published.