ಶಿರ್ಲಾಲು ಕುಡಿದ ಮತ್ತಿನಲ್ಲಿ ಚಿಕ್ಕಪ್ಪನ ಕೊಲೆ !

ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಹಾಡಿಯಂಗಡಿ ಎಂಬಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಚಿಕ್ಕಪ್ಪನನ್ನೇ ಕೊಲೆಗೈದ ಘಟನೆ ಬುಧವಾರ ತಡರಾತ್ರಿ ನಡೆದಿದೆ.

 

ಆನಂದ ಶೆರ್ವೆಗಾರ (63) ಎಂಬವರನ್ನು ತನ್ನ ಪತ್ನಿಯ ಅಕ್ಕನ ಮಗನೇ ತಲೆಗೆ ದೊಣ್ಣೆಯಿಂದ ಹೊಡೆದು ಸಾಯಿಸಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಪತ್ನಿಯ ಅಕ್ಕನ ಮಗ ಕೆರ್ವಾಶೆಯ ಹರೀಶನನ್ನು ಅಜೆಕಾರು ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪತ್ನಿ ಮಕ್ಕಳಿಂದ ಪತ್ಯೇಕವಾಗಿದ್ದರು
ಆನಂದ ಅವರು ಪತ್ನಿ, ಮಕ್ಕಳಿಂದ ಪತ್ಯೇಕವಾಗಿ ವಾಸವಾಗಿದ್ದರು. ತನ್ನಲ್ಲಿದ್ದ 4 ಎಕ್ರೆ ಜಾಗವನ್ನು ಆನಂದ ಅವರು ಜನವರಿಯಲ್ಲಿ ಮಾರಾಟ ಮಾಡಿದ್ದು, ಬಳಿಕ ಪತ್ನಿಯ ಅಕ್ಕನ ಮಗ ಹರೀಶ್‌ ಎಂಬಾತನೊಂದಿಗೆ ವಾಸವಾಗಿದ್ದು, ಜೊತೆಗೆ ಕೆಲಸಕ್ಕೆ ಹೋಗುತ್ತಿದ್ದರು.

ಪತ್ನಿ ಹಾಗೂ ಮಕ್ಕಳು ಶಿರ್ಲಾಲುವಿನ ಮನೆಯಲ್ಲಿ ವಾಸವಾಗಿದ್ದರು ಎಂದು ತಿಳಿದುಬಂದಿದೆ.

Leave A Reply

Your email address will not be published.