ಗೋಂಕುದ ಗಂಗಸರ ಅಡ್ಡೆಗೆ ಅಬಕಾರಿ ದಾಳಿ

ಕಡಬ ತಾಲೂಕಿನ ಎಡಮಂಗಲ ಗ್ರಾಮದ ಪುಳಿಕುಕ್ಕು ಪದ್ಮನಾಭ ಎಂಬವರ ಮನೆಯಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಅಬಕಾರಿ ಇಲಾಖೆಯವರು ಸೊತ್ತು ವಶಕ್ಕೆ ತೆಗೆದುಕೊಂಡಿದ್ದಾರೆ.

 

ದಾಳಿಯ ವೇಳೆ ಸ್ಥಳದಲ್ಲಿ 1 ಲೀಟರ್ ಕಳ್ಳಭಟ್ಟಿ ಸಾರಾಯಿ 11೦ ಲೀ. ಗೇರು ಹಣ್ಣಿನ ರಸ ಹಾಗೂ ಸಾರಾಯಿ ತೆಗೆಯಲು ಉಪಯೋಗಿಸುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಾಳಿ ವೇಳೆ ಆರೋಪಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

ಕಾರ್ಯಾಚರಣೆ ಸಂದರ್ಭ ಪುತ್ತೂರು ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್, , ಸುಳ್ಯ ವಲಯ ನಿರೀಕ್ಷಕ ಸಿದ್ಧಪ್ಪ ಮೇಠಿ, ಪುತ್ತೂರು ಅಬಕಾರಿ ಉಪನಿರೀಕ್ಷಕ ಅಂಗಾರ, ಸಿಬ್ಬಂದಿಗಳಾದ ಪ್ರಮೋದ್, ಅಮರೇಶ, ಶರಣಪ್ಪ ಇದ್ದರು.

Leave A Reply

Your email address will not be published.