ನರಿಮೊಗರು ಒಂದೇ ಕುಟುಂಬದ 9 ಮಂದಿಗೆ ಕೊರೋನಾ ಪಾಸಿಟಿವ್, ಮನೆ ಸೀಲ್ ಡೌನ್

ನರಿಮೊಗರು ಗ್ರಾ.ಪಂ ವ್ಯಾಪ್ತಿಯ ಶೆಟ್ಟಿಮಜಲು ಎಂಬಲ್ಲಿ ಒಂದೇ ಕುಟುಂಬದ 9 ಮಂದಿಗೆ ಕೊರೋನಾ ಪಾಸಿಟಿವ್ ಆಗಿದ್ದು ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಮನೆಯ ಎಲ್ಲಾ 9 ಮಂದಿಗೂ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮೇ.20ರಂದು ಸ್ಥಳಕ್ಕೆ ತೆರಳಿದ ಸಿಡಿಪಿಓ ಶ್ರೀಲತಾ ನೇತೃತ್ವದ ಕೊರೋನಾ ಕಾರ್ಯಪಡೆ ತಂಡ ಮನೆಯವರಿಗೆ ಸೂಕ್ತ ಮಾಹಿತಿ ನೀಡಿ ಮನೆಯನ್ನು ಸೀಲ್‌ಡೌನ್ ಮಾಡಿದ್ದಾರೆ.

 

ಒಂದೇ ಮನೆಯ 9 ಮಂದಿಗೆ ಕೊರೋನಾ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಬಂದಿರುವುದರಿಂದ ಅವರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದ್ದು ಆ ಮನೆಗೆ ಗ್ರಾ.ಪಂನಿಂದ ಆಹಾರ ಪೂರೈಕೆ ವ್ಯವಸ್ಥೆ ಮಾಡಲಾಗುತ್ತದೆ.

ನರಿಮೊಗರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವಿಚಂದ್ರ, ಕಾರ್ಯದರ್ಶಿ ಶೇಕ್ ಖಲಂದರ್, ಗ್ರಾ.ಪಂ ಉಪಾಧ್ಯಕ್ಷ ಸುಧಾಕರ ಕುಲಾಲ್ ಮತ್ತು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Leave A Reply

Your email address will not be published.