ಸುಳ್ಯ-ಮಡಪ್ಪಾಡಿ ರಸ್ತೆ | ಇದು ರೋಡಾ ಅಥವಾ ಕೆಸರು ತುಂಬಿದ ತೋಡಾ ?

ಮಡಪ್ಪಾಡಿ ಸುಳ್ಯ ತಾಲೂಕಿನ ಅತ್ಯಂತ ಪುಟ್ಟದಾದ ಹಾಗೂ ನೈಸರ್ಗಿಕ ಸಂಪತ್ತನ್ನು ತನ್ನೊಳಗೆ ಹೊತ್ತುಕೊಂಡ ಸುಂದರ ಹಳ್ಳಿ ಪ್ರದೇಶ. ಆದರೆ ಇಂದು ಮಡಪ್ಪಾಡಿ ರೋಡ್ ಗೆ ಇಳಿಯದಂತ ಪರಿಸ್ಥಿತಿ ಬಂದು ಬಿಟ್ಟಿದೆ.

ಈ ಹಿಂದೆ ಈ ವಿಭಾಗದಲ್ಲಿ ಗ್ರಾಮವಾಸ್ತವ್ಯ ಮಾಡಿದ ಕಾರ್ಯ ನಿರತ ಪತ್ರಕರ್ತರ ಸಂಘವು ಸಚಿವ ಕೆ. ಎಸ್ ಈಶ್ವರಪ್ಪರಿಗೆ ಮನವಿ ಸಲ್ಲಿಸಿದ ಮೇರೆಗೆ ಒಂದು ಕೋಟಿ ಅನುದಾನವನ್ನು ರಸ್ತೆಗಾಗಿ ಮೀಸಲಿರಿಸಿದ್ದರು. ಆದರೆ ಈ ಹಣವು ಬಿಡುಗಡೆ ಆಗಿಲ್ಲ ಎಂದು ಅಲ್ಲಿನ ಗ್ರಾಮಸ್ಥರು ಹೇಳುತ್ತಿದ್ದಾರೆ.

ಈ ರಸ್ತೆಗಳಲ್ಲಿ ಓಡಾಡಲು ಅಪಾಯಕಾರಿಯಾಗಿದ್ದು, ಒಂದೆಡೆ ಮನೆಯ ಸರಕು ಸಾಮಾನುಗಳನ್ನು ತರಬೇಕೆಂದು ಪೇಟೆಗಳಿಗೆ ಹೋಗಬೇಕಾದ ಪರಿಸ್ಥಿತಿ ಬಂದರೆ, ಇನ್ನೊಂದೆಡೆ ರೋಡ್ ಗೆ ಕಾಲಿಡಲು ಸಾಧ್ಯವಾಗದ ಪರಿಸ್ಥಿತಿ ಜನರನ್ನು ಆತಂಕಕ್ಕೆ ಸಿಲುಕಿಸಿ ಬಿಟ್ಟಿದೆ.

ಕೇವಲ 5 ಕಿ.ಮೀ ದೂರವಿರುವ ಜಿಲ್ಲಾ ಪಂಚಾಯತ್ ರಸ್ತೆಯನ್ನು ದುರಸ್ಥಿಗೊಳಿಸದೇ ತೀರಾ ಹದಗೆಟ್ಟಿದ್ದು, ಕೆಸರಲ್ಲಿ ಒದ್ದಾಡುವಂತಹ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ ಸಂಗತಿ.

ಸೇವಾಜೆ-ಮಡಪ್ಪಾಡಿ ರಸ್ತೆಗಳು ಕೆಸರಿನ ಗದ್ದೆಗಳಾಗಿವೆ. ಇಲ್ಲಿನ ಗ್ರಾಮಸ್ಥರು ಈಗ ತಮ್ಮ ಊರಿನ ಕನಸು ಯಾವಾಗ ನನಸಾಗುತ್ತದೆ ಎನ್ನುವ ಚಿಂತನೆಯಲ್ಲಿ ಇದ್ದಾರೆ.

Leave A Reply

Your email address will not be published.