ವಿಶ್ವದ ಮೊದಲ ನೋಂದಾಯಿತ ಲಸಿಕೆ ತಯಾರಿಸಲಿರುವ ‘ ಶಿಲ್ಪಾ ‘
ವಿಶ್ವದ ಮೊದಲ ನೋಂದಾಯಿತ ಕೋವಿಡ್ ಲಸಿಕೆ ಎಂಬ ಹೆಗ್ಗಳಿಕೆ ಇರುವ ಸ್ಪುಟ್ರಿಕ್ -5 ಲಸಿಕೆ ಕರ್ನಾಟಕದಲ್ಲಿ ಉತ್ಪಾದಿಸಲು ಪ್ರಕ್ರಿಯೆ ಆರಂಭವಾಗಿದೆ.
ರಾಯಚೂರಿನ ಶಿಲ್ಪಾ ಮೆಡಿಕೇರ್ ಮತ್ತು ಡಾ. ರೆಡ್ಡಿಸ್ ಲ್ಯಾಬೋರೇಟರಿ ನಡುವೆ ಈ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಧಾರವಾಡದಲ್ಲಿರುವ ಶಿಲ್ಪಾ ಕಂಪನಿಯ ಕಾರ್ಖಾನೆಯಲ್ಲಿ ಈ ಲಸಿಕೆ ಉತ್ಪಾದನೆ ಮಾಡಲಾಗುತ್ತದೆ.
ಶಿಲ್ಪಾ ಮೆಡಿಕೇರ್ ಔಷಧ ಕಂಪನಿಯ ಅಂಗಸಂಸ್ಥೆಯಾದ ಶಿಲ್ಪಾ ಬಯೋಲಾಜಿಕ್ಸ್ ಪ್ರೈವೇಟ್ ಲಿಮಿಟೆಡ್ ರಾಯಚೂರಿನಲ್ಲಿ ಪ್ರಧಾನ ಕಚೇರಿ ಹೊಂದಿದ್ದು, ಅದರ ಧಾರವಾಡ ಘಟಕದಲ್ಲಿ ಲಸಿಕೆ ಉತ್ಪಾದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಮೂರು ತಿಂಗಳಲ್ಲಿ ಲಸಿಕೆ ಉತ್ಪಾದನೆ ಆರಂಭವಾಗಲಿದೆ. ಅಗತ್ಯ ಯಂತ್ರೋಪಕರಣ, ತಜ್ಞ ಸಿಬ್ಬಂದಿ ಹೊಂದಿದ್ದು ಲಸಿಕೆ ಉತ್ಪಾದನೆಗೆ ಬೇಕಾದ ಎಲ್ಲಾ ತಯಾರಿಯೂ ಮುಗಿದಿದೆ. ಇಲ್ಲೇ ವಾರ್ಷಿಕ ಸುಮಾರು 150 ಮಿಲಿಯನ್ ಮಿಲಿಯನ್ -5 ಲಸಿಕೆ ಉತ್ಪಾದನೆ ಮಾಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.