ಕೊರೋನಾ ರೋಗದಿಂದ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳ ಹೆಸರಿನಲ್ಲಿ 10 ಲಕ್ಷ ಫಿಕ್ಸೆಡ್ ಡಿಪಾಸಿಟ್ ಇಡಲು ಆಂಧ್ರ ಸರ್ಕಾರದ ನಿರ್ಧಾರ
ಮಹಾಮಾರಿ ಕೊರೋನಾ
ಎಲ್ಲೆಡೆ ಮರಣಮೃದಂಗ ಬಾರಿಸುತ್ತಿದ್ದು, ಸೋಂಕಿಗೆ ಇಡೀ ಕುಟುಂಬ ಬಲಿಯಾದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.
ಕುಟುಂಬದ ದುಡಿಯುವ ಆಸರೆಯಾಗಿರುವ ಅಪ್ಪ-ಅಮ್ಮ ಕಳೆದುಕೊಂಡು ಪುಟ್ಟ ಮಕ್ಕಳು ತಬ್ಬಲಿಗಳ ಆಗುತ್ತಿರುವ ಸುದ್ದಿಯನ್ನು ನಾವು ದಿನನಿತ್ಯ ಓದುತ್ತಿದ್ದೇವೆ.
ಇಂತಹ ಕುಟುಂಬದ ಎಲ್ಲರನ್ನೂ ಕಳೆದುಕೊಂಡು ಕಂಗಾಲಾಗಿರುವ ಮಕ್ಕಳ ಹೆಸರಲ್ಲಿ 10 ಲಕ್ಷ ರೂಪಾಯಿ ಫಿಕ್ಸೆಡ್ ಡೆಪಾಸಿಟ್ ಇಡುವ ಮಹತ್ವದ ನಿರ್ಧಾರವನ್ನು ಆಂಧ್ರ ಸರ್ಕಾರ ಕೈಗೊಂಡಿದೆ !
ಇನ್ನು ಮುಂದೆ ಕೋರೋನಾ ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಪ್ರತಿ ಮಗುವಿನ ಹೆಸರಿನಲ್ಲಿ 10 ಲಕ್ಷ ರೂ. ಹಣವನ್ನು ಬ್ಯಾಂಕಿನಲ್ಲಿ ಎಫ್ಡಿ ಇಡಲು ಆಂಧ್ರ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನಿರ್ಧರಿಸಿದ್ದಾರೆ. ಈ ಆದೇಶವನ್ನು ತಕ್ಷಣ ಜಾರಿಗೊಳಿಸುವಂತೆ ಅವರು ಅಧಿಕಾರಿಗಳಿಗೆ ಸೋಮವಾರ ನಿನ್ನೆ ಸೋಮವಾರ ಆದೇಶ ಹೊರಡಿಸಿದ್ದಾರೆ.
ಇದೇ ರೀತಿಯ ಆದೇಶವನ್ನು ಮಧ್ಯಪ್ರದೇಶ ಮತ್ತು ದೆಹಲಿ ಸರ್ಕಾರಗಳು ತೆಗೆದುಕೊಂಡು ಇರುವುದನ್ನು ನಾವು ಇಲ್ಲಿ ಸ್ಮರಿಸಬಹುದಾಗಿದೆ.
ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ, ತನ್ನ ರಾಜ್ಯದ ಜನರ ಸಂಕಷ್ಟಕ್ಕೆ ಮಿಡಿದಿದ್ದು, ಕೋವಿಡ್ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳ ಹೆಸರಿಗೆ ಬ್ಯಾಂಕಿನಲ್ಲಿ 10 ಲಕ್ಷ ಹಣ ಇಡಲಿದ್ದು, ಮಕ್ಕಳಿಗೆ 25 ವರ್ಷ ತುಂಬುವವರೆಗೂ ಆ 10 ಲಕ್ಷ ಹಣ ಹಾಗೆಯೆ ಇರಬೇಕಾಗುತ್ತದೆ. ಅಸಲು ತೆಗೆಯುವಂತೆ ಇಲ್ಲ. ಆದರೆ ಪ್ರತಿ ತಿಂಗಳು ಅದರ ಬಡ್ಡಿ ಹಣವನ್ನು ತೆಗೆದು ಅಗತ್ಯಕ್ಕೆ ತಕ್ಕಂತೆ ಬಳಸಬಹುದು.
ಸಂಕಷ್ಟಕ್ಕೆ ನಲುಗಿರುವ ಅದೆಷ್ಟೋ ಮಕ್ಕಳ ಬದುಕಿಗೆ ಈ ಯೋಜನೆ ದಾರಿದೀಪವಾಗಿದ್ದು, ಜನರಪರ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ದೆಹಲಿ ಸರ್ಕಾರದಿಂದ ತಬ್ಬಲಿ ಗಳಿಗೆೆ ಸಹಾಯ ಹಸ್ತ
ಈ ಮಧ್ಯೆ ದೆಹಲಿ ಸರ್ಕಾರ ಕೂಡ ಎರಡು ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸಹಾಯ ಹಸ್ತ ಚಾಚಿದೆ. ಇಬ್ಬರೂ ಪೋಷಕರನ್ನು ಕಳೆದುಕೊಂಡ ಮಕ್ಕಳು 25 ವರ್ಷ ತುಂಬುವವರೆಗೆ ಪ್ರತಿ ತಿಂಗಳು 2500 ರೂ ಹಣ ಹಾಗೂ ಅವರ ಶಿಕ್ಷಣವನ್ನು ದೆಹಲಿ ಸರ್ಕಾರವು ನೋಡಿಕೊಳ್ಳುತ್ತದೆ ಎಂದು ಘೋಷಿಸಿದ್ದಾರೆ. ಬಡ ಕುಟುಂಬಗಳ 72 ಲಕ್ಷ ಜನರಿಗೆ ಈ ತಿಂಗಳು 10 ಕೆಜಿ ಪಡಿತರ ವಿತರಿಸಲಿದೆ ದೆಹಲಿ ಸರಕಾರ.