ಲಾಕ್ ಡೌನ್ ಕುರಿತು ಪ್ರಧಾನಿ ಮೋದಿಯವರಿಂದ ಮಹತ್ವದ ನಿರ್ಧಾರ
ಕೋವಿಡ್ 19 ಕುರಿತು ರಾಜ್ಯಗಳ ಸಿಎಂ, 46 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಂವಾದವನ್ನು ಇಂದು ನಡೆಸಿದ್ದರು. ಆ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿ, ಲಾಕ್‌ಡೌನ್ ನಿರ್ಧಾರವನ್ನು ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ಬಿಟ್ಟು ಕೊಟ್ಟರು.
ನಾವೆಲ್ಲಾ ಕೊರೋನಾ ನಿಯಂತ್ರಿಸಲು ಪ್ರತಿಯೊಬ್ಬರೂ ಒಗ್ಗಟಾಗಿ ಕೆಲಸ ಮಾಡಬೇಕು. ಕೊರೋನಾ ವಾರಿಯರ್ಸ್‌ಗೆ ಸ್ಫೂರ್ತಿ ತುಂಬಿ ನಿಮ್ಮ ಸ್ಫೂರ್ತಿದಾಯಕ ಮಾತುಗಳಿಂದ ವಾರಿಯರ್ಸ್‌ಗೆ ವಿಶ್ವಾಸ ಹೆಚ್ಚುತ್ತದೆ. ಕೊರೋನಾ ನಿಯಂತ್ರಿಸಲು ಯಾವುದೆ ಮಾರ್ಗವಿದ್ದರೂ ಅದನ್ನು ಅಳವಡಿಸಿಕೊಳ್ಳಿ ಎಂದ ಮೋದಿ ಅವರು, ನಿಮ್ಮ ಕೆಲಸ ಇತರರಿಗೆ ಮಾದರಿಯಾಗಿದೆ ಎಂದು ಅಧಿಕಾರಿಗಳ ಕೆಲಸವನ್ನು ಶ್ಲಾಘಿಸಿದರು. ಪ್ರತಿಯೊಬ್ಬರ ಜೀವ ಉಳಿಸುವುದು ನಮ್ಮ ಕರ್ತವ್ಯ. ನಿಮ್ಮ ಜಿಲ್ಲೆಗಳಲ್ಲಿ ತೆಗೆದುಕೊಂಡ ಕ್ರಮ ಬೇರೆ ಜಿಲ್ಲೆಗಳಿಗೂ ಮಾದರಿ. ಹೀಗಾಗಿ ಲಾಕ್‌ಡೌನ್ ನಿರ್ಧಾರವನ್ನು ಜಿಲ್ಲಾಧಿಕಾರಿಗಳೇ ತೆಗೆದುಕೊಳ್ಳಬಹುದೆಂದು ಪ್ರಧಾನಿ ಮೋದಿ ಹೇಳಿದರು.
ನೀವುಗಳು ಇತರೆ ಜಿಲ್ಲೆಗಳಲ್ಲೂ ಕೋರೋನಾ ನಿಯಂತ್ರಿಸಲು ಸಹಕರಿಸ ಬೇಕು. ರೋಗ ತಡೆಗಟ್ಟಲು ಲಸಿಕೆಯೇ ಅತ್ಯಂತ ಪ್ರಬಲ ಅಸ್ತ್ರ. ಅಲ್ಲದೆ ವ್ಯರ್ಥವಾಗದಂತೆ ನೋಡಿಕೊಳ್ಳಿ ಎಂದು ಹೇಳಿದರು. ಯಾವುದೇ ನಿರ್ಧಾರ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಫ್ರೀ ಹ್ಯಾಂಡ್ ಕೊಟ್ಟರು. ಡಿಸಿಗಳೇ ಫೀಲ್ಡ್ ಮಾರ್ಷಲ್‌ಗಳು ಎಂದು ಹೊಗಳಿ ಅಧಿಕಾರಿ ವರ್ಗಗಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮೋದಿ ಮಾಡಿದರು.