Ad Widget

ಒಂದೇ ದಿನ ಅವಳಿ ಟೆಕ್ಕಿ ಸಹೋದರರು ಕೋವಿಡ್‌ಗೆ ಬಲಿ

ಒಂದೇ ದಿನ‌ ಅವಳಿ ಟೆಕ್ಕಿ ಸಹೋದರರು ಕೋವಿಡ್‌ಗೆ ಬಲಿಯಾದ ಘಟನೆ ಮೀರತ್‌ನಲ್ಲಿ‌ ನಡೆದಿದೆ.

ಮೀರತ್ ನಗರದ ನಿವಾಸಿಗಳಾದ ಜೋಫ್ರೆಡ್ ವರ್ಗೀಸ್ ಗ್ರೆಗರಿ ಹಾಗೂ ರಾಲ್ಫ್ರೆಡ್ ಜಾರ್ಜ್ ಗ್ರೆಗರಿ ಎಂಬ ಅವಳಿ ಸಹೋದರರೇ ಕೋವಿಡ್‌ಗೆ ಬಲಿಯಾದ ದುರ್ದೈವಿಗಳು. ಇವರಿಬ್ಬರೂ ಕಂಪ್ಯೂಟರ್ ಇಂಜಿನಿಯರಿಂಗ್ ಪದವೀಧರರಾಗಿದ್ದು,ಹೈದರಾಬಾದ್‍ನಲ್ಲಿ ಉದ್ಯೋಗದಲ್ಲಿದ್ದರು.

ಇಬ್ಬರೂ ತಮ್ಮ 24ನೇ ಹುಟ್ಟುಹಬ್ಬದ ಮರುದಿನವೇ, ಎಪ್ರಿಲ್ 24ರಂದು ಕೋವಿಡ್ ಸೋಂಕಿಗೊಳಗಾಗಿದ್ದರು.

ಚಿಕಿತ್ಸೆಗೆ ಸ್ಪಂದಿಸದೆ ಈ ಅವಳಿ ಸಹೋದರರು ಕಳೆದ ವಾರ ಕೆಲವೇ ಗಂಟೆಗಳ ಅಂತರದಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಒಬ್ಬ ಮೇ 13ರಂದು ಮೃತಪಟ್ಟರೆ ಇನ್ನೊಬ್ಬ ಮೇ 14ರಂದು ಮೃತಪಟ್ಟಿದ್ದಾರೆ ಎಂದು timesofindia ವರದಿ ಮಾಡಿದೆ.

Ad Widget Ad Widget Ad Widget
Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: