ಬೆಳ್ತಂಗಡಿಯ ಈ ಬ್ಯಾಂಕಿನ ಬರೋಬ್ಬರಿ 10 ಕ್ಕೂ ಅಧಿಕ ಸಿಬ್ಬಂದಿಗಳಿಗೆ ಕೊರೋನಾ ಧೃಡ | ಆತಂಕದಲ್ಲಿ ಗ್ರಾಹಕರು !
ಬೆಳ್ತಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಭಾರತೀಯ ಸ್ಟೇಟ್ ಬ್ಯಾಂಕ್ನಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 11ಕ್ಕೂ ಅಧಿಕ ಸಿಬ್ಬಂದಿಗಳಿಗೆ ಕೊರೊನಾ ಧೃಢಪಟ್ಟಿದ್ದು, ಆತಂಕ ಸೃಷ್ಟಿಯಾಗಿದೆ.
ಹೆಚ್ಚು ಜನದಟ್ಟನೆಯ ವ್ಯವಹಾರ ಇರುವ ಈ ಬ್ಯಾಂಕಿನ ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದಿರುವುದು, ಬ್ಯಾಂಕಿನೊಂದಿಗೆ ವ್ಯವಹರಿಸಿದ ಹಲವು ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸಿದೆ.
ಈ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಕಛೇರಿಯ ಎಲ್ಲಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಬ್ಯಾಂಕನ್ನು ಸ್ಕ್ಯಾನಿಟೈಸೇಷನ್ ಮಾಡುವ ಉದ್ದೇಶದಿಂದ ಇಂದು (ಮೇ.17) ಒಂದು ದಿನದ ಮಟ್ಟಿಗೆ ಬ್ಯಾಂಕ್ ವ್ಯವಹಾರಗಳನ್ನು ಸ್ಥಗಿತಗೊಳಿಸಲಾಗಿದ್ದು,
ನಾಳೆ (ಮೇ.18) ಎಂದಿನಂತೆ ವ್ಯವಹಾರಗಳು ನಡೆಯಲಿದೆ ಎಂದು ಬ್ಯಾಂಕ್ನ ಪ್ರಕಟಣೆ ತಿಳಿಸಿದೆ.