ತಾಯಿಯ ಗರ್ಭದಿಂದ ಮಗುವಿನ ಕಾಲು ಮೊದಲು ಹೊರಬಂದು ನೇತಾಡುತ್ತಿತ್ತು | ತಕ್ಷಣಕ್ಕೆ ಹೆರಿಗೆ ಮಾಡಿಸಲು ಅಲ್ಲಿ ಯಾರೂ ಇರಲಿಲ್ಲ !!
ಕೋರೊನಾ ರೋಗದ ಕಾರಣದಿಂದ ಕೋವಿಡ್ ರೋಗಿಗಳು ಮಾತ್ರವಲ್ಲ ನಾನ್ ಕೋವಿಡ್ ರೋಗಿಗಳು ಕೂಡ ಸಮಾನವಾಗಿ ತೊಂದರೆಗೆ ಒಳಪಡುತ್ತಿದ್ದಾರೆ.
ನಾನ್ ಕೋವಿಡ್ ರೋಗಿಗಳು ಕೂಡ ಸಕಾಲಕ್ಕೆ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ ಮತ್ತು ಈ
ನಾನ್ ಕೋವಿಡ್ ಗ್ರೂಪ್ ರೋಗಿಗಳ ಪರಿಸ್ಥಿತಿ ಎಷ್ಟು ಕರುಣಾಜನಕವಾಾಗುಟ್ಟಿಿದೆ ಎಂಬುದಕ್ಕೆ ವಿಜಯಪುರದಲ್ಲಿ ಇಂದು ನಡೆದ ಒಂದು ಘಟನೆಯೇ ಸಾಕ್ಷಿ.
ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ಹಣಮವ್ವ ಕೊರವರ ಎಂಬ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕುಟುಂಬಸ್ಥರು ಆಕೆಯನ್ನು ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ದರೂ ಎಲ್ಲಿಯೂ ದಾಖಲಿಸಿಕೊಂಡಿಲ್ಲ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದೇ ಬಂತು. ಏನೂ ಪ್ರಯೋಜನವಾಗಿಲ್ಲ. ಅಷ್ಟೊತ್ತಿಗಾಗಲೇ ಮಗು ಅಡ್ವಾನ್ಸ್ ಆಗುತ್ತಿತ್ತು. ಸಮಯ ಕಳೆಯುತ್ತಿದ್ದಂತೆ ಜೈವಿಕ ಕ್ರಿಯೆ ಮುಂದುವರೆಯಲೇ ಬೇಕಲ್ಲವೇ ? ಅಂತೆಯೇ ಮಗು ಅಮ್ಮನ ಗರ್ಭದಿಂದ ಹೊರಬರಲು ಪ್ರಾರಂಭ ಮಾಡಿದೆ. ಮೊದಲು ಮಗುವಿನ ಕಾಲು ಹೊರಬಂದಿದ್ದು ಅಲ್ಲಿ ಭಾರೀ ಆತಂಕವನ್ನು ಹುಟ್ಟಿಸಿದೆ. ಸಾಕುಪ್ರಾಣಿಗಳು ಕೊಟ್ಟಿಗೆಯಲ್ಲಿ ಹೆರಿಗೆ ಆಗುವಾಗ ಕರು ಮರಿಗಳು ಕಾಲು ಹೊರ ಹಾಕಿಕೊಂಡು ಬಂದಂತೆ ಆ ಮಗುವಿನ ಕಾಲು ಮೊದಲು ಬಂದಿದೆ.
ದಯವಿಟ್ಟು ತಾಯಿ-ಮಗುವಿನ ಪ್ರಾಣ ಉಳಿಸಿ ಕುಟುಂಬಸ್ಥರು ಆಸ್ಪತ್ರೆ ಬಳಿ ಆಕಾಶಕ್ಕೆ ದೃಷ್ಟಿ ನೆಟ್ಟು ಆಕ್ರಂದನ ಮಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಈ ಸುದ್ದಿ ಜಿಲ್ಲಾಡಳಿತಕ್ಕೆ ಮುಟ್ಟಿದ್ದು, ಕೂಡಲೇ ಅದೇ ಖಾಸಗಿ ಆಸ್ಪತ್ರೆಗೆ ಬೇರೆ ವೈದ್ಯರನ್ನು ಕರೆಯಿಸಿ ಹೆರಿಗೆ ಮಾಡಿಸಲಾಗಿದೆ. ಆದರೆ ಮಗು ಬದುಕುಳಿದಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು, ಈ ಬಗ್ಗೆ ವೈದ್ಯರಿಂದ ಅಧಿಕೃತ ಮಾಹಿತಿ ಹೊರಬರಬೇಕಿದೆ.