ವೇಣೂರು ಗರ್ಡಾಡಿಯಲ್ಲಿ ನೀರುನಾಯಿಗಳ ಪತ್ತೆ | ನೀರಿನಲ್ಲಿ ಮೀನುಗಳನ್ನು ತಿನ್ನುತ್ತಿರುವ ದೃಶ್ಯ ಕಂಡ ಸಾರ್ವಜನಿಕರು
ಬೆಳ್ತಂಗಡಿ ತಾಲೂಕಿನ ವೇಣೂರು ಗರ್ಡಾಡಿ ಗ್ರಾಮದಲ್ಲಿ ಹರಿಯುವ ಫಲ್ಗುಣಿ ನದಿಯಲ್ಲಿ ನೀರು ನಾಯಿಗಳು ಮೀನುಗಳನ್ನು ಹಿಡಿದು ತಿನ್ನುವ ದೃಶ್ಯ ನೋಡಿ ಜನರಿಗೆ ಅಚ್ಚರಿ ಮೂಡಿಸಿದೆ.
ಈಗ ಬಂದ ಜಡಿಮಳೆಗೆ ಹರಿದು ಬಂದ ಕೆಂಪುನೀರಿನಲ್ಲಿ ಆಟವಾಡುತ್ತಾ, ಕಲ್ಲು ಬಂಡೆಗಳ ಕೊರಕಲು ಜಾಗದಲ್ಲಿ ಹಸಿ ಮೀನು ವಾಸನೆ ಹುಡುಕಿ ತಿನ್ನುತ್ತಾ ಇರುವ ವಿಡಿಯೋ ಒಂದನ್ನು ಸ್ಥಳೀಯ ಹುಡುಗರು ಸೆರೆಹಿಡಿದಿದ್ದಾರೆ.
ನೀರು ನಾಯಿಗಳ ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಏನಿದು ನೀರು ನಾಯಿ?
ಭಾರತದಲ್ಲಿ ಕಾಶ್ಮೀರ,ಅಸ್ಸಾಂ ಹಾಗೂ ದಕ್ಷಿಣ ಭಾರತದಲ್ಲಿ ಇದು ವ್ಯಾಪಕವಾಗಿದೆ.ಇದು ನದಿಗಳ ಸಮೀಪ ಬಂಡೆಗಳ ಪೊಟರೆಗಳಲ್ಲಿ ವಾಸಿಸುವುದು.
ನೀಳ ದೇಹ, ನೀರಿನಲ್ಲಿ ತೋಯದ ತುಪ್ಪಳದ ಚರ್ಮ,ಚಪ್ಪಟೆಯಾದ ತಲೆ,ಬಲವಾದ ಬಾಲ,ಹುಟ್ಟುಗಳಿಂತಿರುವ ಪಾದಗಳು, ಸ್ಪರ್ಶಸೂಕ್ಷ್ಮ ಮೀಸೆಗೂದಲು ಇವು ನೀರುನಾಯಿಯ ಮುಖ್ಯ ಲಕ್ಷಣಗಳು.ಮುಖ್ಯ ಆಹಾರ ಮೀನು.ಏಡಿ,ಕಪ್ಪೆ,ಬಾತುಕೋಳಿ,ನೀರುಕೋಳಿ ಹಾಗೂ ಕೆಲವೊಮ್ಮೆ ಎಲೆಗಳು ಕೂಡಾ ಇದರ ಆಹಾರವಾಗುವವು.ಗರ್ಭಧಾರಣಾ ಅವದಿ ಸುಮಾರು 90 ದಿನಗಳು.
ಕರ್ನಾಟಕದಲ್ಲಿ ನೀರುನಾಯಿ ಸಂಪಾದಿಸಿ
ತುಂಗಭದ್ರಾ ನದಿಗುಂಟ ಅಪಾರ ಸಂಖ್ಯೆಯಲ್ಲಿ ಅಪರೂಪದ ‘ನೀರುನಾಯಿ’ಗಳಿವೆ (ಆಟರ್).ಕೊಪ್ಪಳ ಜಿಲ್ಲೆಯ ಮುದ್ಲಾಪುರ ಗ್ರಾಮದಿಂದ ಹೊಸಪೇಟೆ ತಾಲ್ಲೂಕಿನ ಹಂಪಿ, ಕಂಪ್ಲಿ ಪಟ್ಟಣದವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ನೀರುನಾಯಿಗಳನ್ನು ಕಾಣಬಹುದು. ಈ ಭಾಗಗಳ ಮೂಲಕ ತುಂಗಭದ್ರೆ ಹರಿಯುವ ಕಾರಣದಿಂದ ಈ ಪ್ರದೇಶವನ್ನೇ ನೀರುನಾಯಿಗಳು ಆವಾಸ ಸ್ಥಾನ ಮಾಡಿಕೊಂಡಿವೆ.
ಸ್ಥಳೀಯ ವನ್ಯಜೀವಿ ಮತ್ತು ಪರಿಸರ ಪ್ರೇಮಿಗಳ ಸತತ ಪ್ರಯತ್ನದಿಂದ 2015ರ ಏಪ್ರಿಲ್ನಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯು 34 ಕಿ.ಮೀ. ಪ್ರದೇಶವನ್ನು ‘ನೀರು ನಾಯಿ ಸಂರಕ್ಷಿತ ಪ್ರದೇಶ’ ಎಂದು ಘೋಷಿಸಿದೆ.
‘ನದಿಯ ಎರಡೂ ಕಡೆ ಅಪಾರ ಸಂಖ್ಯೆಯಲ್ಲಿ ನೀರುನಾಯಿಗಳಿವೆ. ಆದರೆ, ಅವೈಜ್ಞಾನಿಕವಾಗಿ ನಡೆಯುತ್ತಿರುವ ಮೀನುಗಾರಿಕೆ, ಮರಳುಗಾರಿಕೆಯಿಂದ ಅವುಗಳಿಗೆ ತೊಂದರೆ ಆಗುತ್ತಿದೆ.