ಮೊಬೈಲ್ ವಿಚಾರದಲ್ಲಿ ಜಗಳ | ಯುವಕ‌‌ ನಾಪತ್ತೆ ,ಪೊಲೀಸರಿಗೆ ದೂರು

 

ಮಂಗಳೂರು :ಮೊಬೈಲ್ ವಿಚಾರದಲ್ಲಿ ಜಗಳವಾಡಿ ಯುವಕನೊಬ್ಬ ನಾಪತ್ತೆಯಾಗಿರುವ ಕುರಿತು ಉಳ್ಳಾಲ ಠಾಣೆಯಲ್ಲಿ ದೂರು ವ್ಯಾಪ್ತಿಯ ಕೆ.ಸಿ.ನಗರ ಫಲಾಹ್ ಶಾಲೆ ಬಳಿ ಗುರುವಾರ ನಡೆದಿದ್ದು, ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೇಖ್ ಝಾಹಿದ್ ನಿಝ್ಮಾನ್ (19) ನಾಪತ್ತೆ ಯಾದ ಯುವಕ.

ಗುರುವಾರ ಮನೆಯಲ್ಲಿ ಮೊಬೈಲ್ ವಿಚಾರ ದಲ್ಲಿ ಜಗಳವಾಡಿದ್ದ ಶೇಖ್ ಝಾಹಿದ್ ನಿಝ್ಮಾನ್ ಬಳಿಕ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೆ ನಾಪತ್ತೆ ಆಗಿದ್ದಾರೆ ಎಂದು ನಿಝ್ಮನ್ ತಂದೆ ನಝೀರ್ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ.

ಈತನ ಕುರಿತು ಮಾಹಿತಿ ದೊರೆತಲ್ಲಿ ಉಳ್ಳಾಲ ಪೊಲೀಸ್ ಠಾಣೆ 0824-2466269 ಕರೆ ಮಾಡಿ ತಿಳಿಸುವಂತೆ ಕೋರಲಾಗಿದೆ.

Leave A Reply

Your email address will not be published.