ಇಪ್ಪತೈದು ಜನರಿಂದ ಯುವತಿಯ ಅತ್ಯಾಚಾರ | ಸ್ನೇಹಿತನ ಮಾತು ನಂಬಿ ಹೋದವಳನ್ನು ಮುಕ್ಕಿದ ಕಿರಾತಕರು | ಸ್ನೇಹಿತನೇ ಪ್ರಮುಖ ಆರೋಪಿ

ಸುಮಾರು 25 ಮಂದಿ ಯುವಕರು ಯುವತಿಯೊಬ್ಬಳನ್ನು ಮೇಲೆ ಗ್ಯಾಂಗ್‌ ರೇಪ್ ಮಾಡಿದ ಪ್ರಕರಣ ದೆಹಲಿಯಿಂದ ತಡವಾಗಿ ಬೆಳಕಿಗೆ ಬಂದಿದೆ.

ದೆಹಲಿಯ ಯುವತಿಯೊಬ್ಬಳು ತನ್ನ ಫೇಸ್‌ಬುಕ್ ಸ್ನೇಹಿತನ ಸಲಹೆಯಂತೆ ಆತನ ಪೋಷಕರನ್ನು ಭೇಟಿ ಮಾಡಲೆಂದು ತೆರಳಿದ್ದಾಗ ಈ ಘಟನೆ ನಡೆದಿದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

ಪೋಷಕರನ್ನು ಭೇಟಿ ಮಾಡಿಸುತ್ತೇನೆಂದು ನಂಬಿಸಿ ಆಕೆಯನ್ನು ಕರೆಸಿಕೊಂಡಿದ್ದ ಫೇಸ್’ಬುಕ್ ಸ್ನೇಹಿತನೇ ಈ‌ ಕೃತ್ಯಕ್ಕೆ ಮೂಲ ಕಾರಣ ಎಂದು ಆಪಾದಿಸಲಾಗಿದೆ.

ಫೇಸ್‌ಬುಕ್ ಸ್ನೇಹಿತನ ಮಾತು ನಂಬಿ ಬಂದ ಆ ಯುವತಿಯ ಮೇ 3 ರಂದು ರಾತ್ರಿ ಮತ್ತು ಮೇ.4ರ ಬೆಳಗ್ಗೆ 25 ಜನರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದಳು.

ಈ ಘಟನೆ ನಡೆದು 9 ದಿನಗಳ ನಂತರ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

ದೆಹಲಿಯಲ್ಲಿ ಕೆಲಸ ಮಾಡುತ್ತಿರುವ ಯುವತಿ ಸುಮಾರು ನಾಲ್ಕು ವರ್ಷಗಳಿಂದ ಅಲ್ಲೇ ವಾಸವಿದ್ದಳು.

ಯುವತಿಯ ಫೇಸ್‌ಬುಕ್ ಸ್ನೇಹಿತ ಅವಳನ್ನು ಮದುವೆಯಾಗಲು ಪ್ರಪೋಸ್ ಮಾಡಿದ್ದು,ಯುವತಿ ಸಾಗರ್ ಜತೆ ಫೋನ್‌ನಲ್ಲಿ ಮಾತನಾಡಲು ಪ್ರಾರಂಭಿಸಿದ್ದಳು. ಸ್ವಲ್ಪ ಸಮಯದ ನಂತರ ಮದುವೆ ಬಗ್ಗೆ ಪ್ರಸ್ತಾಪಿಸಿ, ತನ್ನ ಹೆತ್ತವರಿಗೆ ಪರಿಚಯಿಸಲು ಯುವಕ ಮುಂದಾಗಿದ್ದ. ನಂತರ 23 ವರ್ಷದ ವ್ಯಕ್ತಿ ಯುವತಿಯನ್ನು ಹೊಡಾಲ್‌ಗೆ ಬರುವಂತೆ ಹೇಳಿದ್ದಾನೆ.

ಆರೋಪಿ ಫೇಸ್‌ಬುಕ್ ಸ್ನೇಹಿತ ಯುವತಿಯನ್ನು ರಾಮ್‌ಘರ್ ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದಾನೆ.

ಮೇ 3 ರಂದು ಯುವತಿ ಹೊಡಾಲ್‌ಗೆ ಪ್ರಯಾಣಿಸಿ ವ್ಯಕ್ತಿಯನ್ನು ಭೇಟಿಯಾಗಿದ್ದರು. ಹೆತ್ತವರನ್ನು ಭೇಟಿಯಾಗಲು ಕರೆದೊಯ್ಯುವ ಬದಲು, ಸಾಗರ್ ಅವಳನ್ನು ರಾಮಘರ್ ಗ್ರಾಮದ ಅರಣ್ಯಕ್ಕೆ ಕರೆದೊಯ್ದಿದ್ದಾನೆ. ಸಾಗರ್ ಸಹೋದರ ಮತ್ತು ಅವನ ಸ್ನೇಹಿತರ ಗುಂಪು ಕಾಡಿನ ಟ್ಯೂಬ್‌ವೆಲ್ ಬಳಿ ಮದ್ಯ ಸೇವಿಸುತ್ತಿದ್ದರು ಎನ್ನಲಾಗಿದೆ.

ಯುವತಿ ಸ್ಥಳಕ್ಕೆ ತಲುಪಿದಾಗ ಆರೋಪಿಗಳು ಅವಳ ಮೇಲೆ ಗುಂಡು ಹಾರಿಸಿ ಅತ್ಯಾಚಾರ ಮಾಡಿದ್ದಾರೆ. ಮರುದಿನ ಆಕೆಯನ್ನು ಆಕಾಶ್ ಎಂಬ ವ್ಯಾಪಾರಿ ಬಳಿ ಕರೆದೊಯ್ಯಲಾಯಿತು.

ಈ ಸ್ಥಳದಲ್ಲಿ ಆಕೆಯನ್ನು ಐದು ಪುರುಷರು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪದೇ ಪದೇ ಲೈಂಗಿಕ ದೌರ್ಜನ್ಯ ನಡೆಸಿದ ನಂತರ ಯುವತಿಯ ಸ್ಥಿತಿ ವಿಷಮವಾದಾಗ ಐವರು ಆರೋಪಿಗಳು ಅವಳನ್ನು ಬದರ್‌ಪುರ ಗಡಿಯ ಬಳಿ ಬಿಟ್ಟು ಪರಾರಿಯಾಗಿದ್ದಾರೆ.

ಯುವತಿ ಹಾಸನಪುರ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ಮೇ 12 ರಂದು ದೂರು ದಾಖಲಿಸಿದ್ದಾರೆ. ಯುವತಿ ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ದೂರು ನೀಡಲು ವಿಳಂಬವಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಶುಕ್ರವಾರ ಸಾಗರ್‌ನನ್ನು ಬಂಧಿಸಿದ್ದಾರೆ.

Leave A Reply

Your email address will not be published.