Ad Widget

ನಟಿ ರಶ್ಮಿಕಾ ಮಂದಣ್ಣ ಮದುವೆ ಆಗೋ ಹುಡುಗ ಈ ಊರಿನವನಂತೆ !!

ನಟಿ ರಶ್ಮಿಕಾ ಮಂದಣ್ಣ ಇದೀಗ ಭಾಷೆಗಳ ಗಡಿಗಳನ್ನು ದಾಟಿ ಯುವಜನತೆಯ ಹೃದಯಕ್ಕೆ ಲಗ್ಗೆ ಇಟ್ಟ ಹುಡುಗಿ. ಆಕೆ ನ್ಯಾಷನಲ್ ಕ್ರಶ್. ವಿಗರ್ ಇಟ್ಟುಕೊಂಡ ಹುಡುಗರ ಪಾಲಿನ ಮಸ್ತ್ ಮಲ್ಲ ಫಿಗರ್. ಇಂತಹಾ ರಶ್ಮಿಕಾ ಮಂದಣ್ಣ, ತಮಿಳುನಾಡಿನ ಸೊಸೆ ಆಗುವ ಆಸೆಯನ್ನು ಹೊರ ಹಾಕಿದ್ದಾರೆ. ಹಾಗಾದರೆ ಆಕೆ ತಮಿಳುನಾಡಿನ ಹುಡುಗನನ್ನು ಸೆಲೆಕ್ಟ್ ಮಾಡಿ ಆಗಿದೆಯಾ ಎನ್ನುವುದು ಸಿನಿರಸಿಕರ ಪ್ರಶ್ನೆ.

ಆಕೆ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಕುರಿತು ಮನಬಿಚ್ಚಿ ಮಾತನಾಡಿದ್ದು, ತಮಗೆ ತಮಿಳುನಾಡಿನ ಸೊಸೆಯಾಗುವ ಇಷ್ಟದ ಕುರಿತು ಇಂಗಿತ ವ್ಯಕ್ತಪಡಿಸಿದ್ದಾರೆ. ತಮಿಳಿನಲ್ಲಿ ರಶ್ಮಿಕಾ ಅಭಿನಯಿಸಿರುವ ಮೊದಲ ಚಿತ್ರ ಇತ್ತೀಚೆಗೆ ತೆರೆ ಕಂಡು ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಇದರ ಬೆನ್ನಲ್ಲೇ ಇದೀಗ ರಶ್ಮಿಕಾ ಮಂದಣ್ಣ ತಮಿಳು ಸೊಸೆಯಾಗುವ ಬಗ್ಗೆ ಹೇಳಿಕೊಂಡಿದ್ದಾರೆ.

ನನಗೆ ತಮಿಳು ಸಂಸ್ಕೃತಿ, ಸಂಪ್ರದಾಯ ಅಂದರೆ ತುಂಬಾ ಇಷ್ಟ. ವಿಶೇಷವಾಗಿ ತಮಿಳರ ಊಟ, ಆಹಾರ ಪದಾರ್ಥಗಳು ಬಹಳ ಇಷ್ಟವಾಗುತ್ತದೆ. ಹೀಗಾಗಿ ತಮಿಳರ ಮನೆಯ ಸೊಸೆ ಆಗಬೇಕು ಅನ್ನೋದು ನನ್ನ ಆಸೆ ಎಂದು ಸಂದರ್ಶನವೊಂದರಲ್ಲಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ತಮಿಳು ಸಿನಿಮಾ ಹಿಟ್ ಆಗುತ್ತಿದ್ದಂತೆ ರಶ್ಮಿಕಾ ಮಂದಣ್ಣ ಇದೀಗ ಮದುವೆ ವಿಚಾರ ಮಾತನಾಡಿರುವುದು, ಅದರಲ್ಲೂ ತಮಿಳರ ಮನೆಯ ಸೊಸೆ ಆಗುತ್ತೇನೆ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ಇತ್ತ ರಶ್ಮಿಕಾ ಮಂದಣ್ಣಗೆ ತಮಿಳುನಾಡಿನ ಊಟ ಇಷ್ಟ ಅಂತ ಆಕೆಯೇ ಹೇಳಿಕೊಂಡಿದ್ದಾಳೆ. ಆದರೆ ಆಕೆಯ ಇಷ್ಟದ ಕಾಚೆ ಪುಳಿ ಹಾಕಿ ಮಾಡಿದ ‘ ಪಂದಿ ಕರಿ ‘ ತಮಿಳುನಾಡಿನಲ್ಲಿ ತಿನ್ನಲು ಏನು ಮಾಡೋದು. ತಮಿಳ್ ನಾಡಿನಲ್ಲಿ ಹಂದಿ ಕರಿ ಬಿಡಿ, ಹಂದಿ ಫೋಟೋ ತೋರಿಸಿದರೂ ದೂರ ಓಡಿ ಹೋಗುತ್ತಾರೆ ಜನ. ಹಾಗಾಗಿ ಈ ಸಂಬಂಧ ಸೆಟ್ ಆಗಲ್ಲ, ರಶ್ಮೀಕಾ ಮಡಿಕೇರಿ ಹುಡುಗನನ್ನೇ ಆಯ್ಕೆ ಮಾಡ್ಕೋತಾಳೆ ಎನ್ನುತ್ತಾ ಕೂರ್ಗಿ ಬಾಯ್ಸ್ ತಾಳ್ಮೆಯಿಂದ ವೈಟಿಂಗು !!

Ad Widget Ad Widget Ad Widget
Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: