ಸಂಜೆವಾಣಿ ಮಂಗಳೂರು ಆವೃತ್ತಿಯ ವ್ಯವಸ್ಥಾಪಕ ಕೋವಿಡ್ ಗೆ ಬಲಿ

 

ಸಂಜೆವಾಣಿ ಪತ್ರಿಕೆಯ ಮಂಗಳೂರು ಆವೃತ್ತಿಯ ವ್ಯವಸ್ಥಾಪಕ ವಿಜಯ ಎಸ್. ರಾವ್ (55) ಕೋವಿಡ್ ಸೋಂಕಿನಿಂದ ಗುರುವಾರ ತಡರಾತ್ರಿ ಮೃತಪಟ್ಟಿದ್ದಾರೆ.

ಕೋವಿಡ್ ಸೋಂಕಿಗೆ ಪಾಸಿಟಿವ್ ಆಗಿದ್ದ ಇವರು ಕಳೆದೆರಡು ವಾರಗಳಿಂದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.

ಇವರು ಕಳೆದ 18 ವರ್ಷಗಳಿಂದ ಸಂಜೆವಾಣಿ ಪತ್ರಿಕೆಯ ಮಂಗಳೂರು ಆವೃತ್ತಿಯ ವ್ಯವಸ್ಥಾಪಕರಾಗಿದ್ದರು.

Leave A Reply

Your email address will not be published.