ಅಕ್ಷಯ ತೃತೀಯ ಶುಭದಿನ | ಆಭರಣ ಖರೀದಿಗೆ ಮುಳಿಯ ಜ್ಯುವೆಲ್ಸ್ ಇ-ಕಾಮರ್ಸ್ ವರ್ಚುವಲ್ ಸೇಲ್ಸ್ ಆರಂಭ

         

ಪುತ್ತೂರು: ಸದಾ ಹೊಸತನವನ್ನು ಪರಿಚಯಿಸುತ್ತಿರುವ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಕೋರ್ಟ್ ರಸ್ತೆಯ ಮುಳಿಯ ಜ್ಯುವೆಲ್ಸ್ ಕೊರೋನ ಲಾಕ್‌ಡೌನ್ ಸಂದರ್ಭದಲ್ಲಿ ಗ್ರಾಹಕರಿಗೆ ತಮಗೆ ಇಷ್ಟವಾದ ಆಭರಣಗಳನ್ನು ಮನೆಯಲ್ಲಿ ಕುಳಿತು ಖರೀದಿಸುವ ವ್ಯವಸ್ಥೆಯನ್ನು ಕಲ್ಪಿಸಿದೆ. ಮುಳಿಯ ಇ-ಕಾಮರ್ಸ್ ವರ್ಚುವಲ್ ಸೇಲ್ಸ್ ಮೇ.10ರಂದು ಪ್ರಾರಂಭಗೊಂಡಿದೆ.

ಇ-ಕಾಮರ್ಸ್ ವರ್ಚುವಲ್ ಸೇಲ್ಸ್‌ಗೆ ಮೇ.12ರಂದು ಭಾರತದಲ್ಲಿ ಅತೀ ಹೆಚ್ಚು ಸಕ್ಕರೆ ಉತ್ಪಾದಿಸುವ ಬಾಗಲಕೋಟೆ ಜಿಲ್ಲೆಯ ಬೆಳಗಿ ಸಮೂಹದ ನಿರ್ದೇಶಕ ವಿಜಯ್ ನಿರಾಣಿಯವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಗ್ರಾಹಕ ಶಂಕರನಾರಾಯಣ ಭಟ್ ಸಾರಡ್ಕರವರು ಮಾತನಾಡಿ, ಮುಳಿಯದ ಈ ವಿಶೇಷ ಸಂಭ್ರಮ ಗ್ರಾಹಕರಿಗೆ ತುಂಬಾ ಉಪಯುಕ್ತವಾಗಿ ಕೊರೋನಾ ಕಷ್ಟದ ಸಂದರ್ಭದಲ್ಲಿ ಚಿನ್ನ ಖರೀದಿಸಲು ಇದೊಂದು ಸೂಕ್ತ ವೇದಿಕೆ. ಅದೇ ರೀತಿ ಈ ವ್ಯವಸ್ಥೆ ಕಲ್ಪಿಸಿದ ಮುಳಿಯ ಸಂಸ್ಥೆಗೆ ಶುಭವನ್ನು ಹಾರೈಸಿದರು.

ಗ್ರಾಹಕ ಜೀವನ್ ಉಪ್ಪಳಿಗೆಯವರು ಮಾತನಾಡಿ ಮುಳಿಯ ಜ್ಯುವೆಲ್ಸ್‌ನವರು ಕೊರೋನಾ ಸಂದರ್ಭದಲ್ಲಿ ಹಲವಾರು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿರುತ್ತದೆ. ಇದು ಒಂದು ಮೆಚ್ಚುಗೆಯ ವಿಷಯ ಎಂದು ಹೇಳಿದರು.

ಸಂಸ್ಥೆಯ ಚೇರ್‌ಮೇನ್ ಮತ್ತು ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯರವರು ಮಾತನಾಡಿ, ಕೊರೋನಾ ಸಂದರ್ಭದಲ್ಲಿ ನಾವು ಹಲವಾರು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಂಡಿದ್ದು, ಇದೇ ರೀತಿ ಗ್ರಾಹಕರು ಮನೆಯಲ್ಲೇ ಕುಳಿತು ಆಭರಣ ಖರೀದಿ ಮಾಡಲು ಮುಳಿಯ ಇ-ಕಾಮರ್ಸ್ ಎಂಬ ವ್ಯವಸ್ಥೆಯನ್ನು ಕಲ್ಪಿಸಿದ್ದೇವೆ. ಇದರಿಂದ ಗ್ರಾಹಕರಿಗೆ ಅನೇಕ ರೀತಿಯಲ್ಲಿ ಪ್ರಯೋಜನವಾಗಲಿದೆ ಎಂದರು.

ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಮಾತನಾಡಿ, ಇದೇ ಮೇ.14 ಅಕ್ಷಯ ತೃತೀಯ ಶುಭ ದಿನದಂದು ಚಿನ್ನಾಭರಣಗಳನ್ನು ಖರೀದಿಸಲು ಮುಳಿಯದ ಈ ವರ್ಚುವಲ್ ಕೌಂಟರ್‌ನ ಸದುಪಯೋಗ ಪಡೆಸಿಕೊಳ್ಳಬಹುದೆಂದು ಅವರು ತಿಳಿಸಿದರು.

ಮಾರ್ಕೇಟಿಂಗ್ ಕನ್ಸ್‌ಲ್ಟೆಂಟ್ ವೇಣುಶರ್ಮರವರು ಪ್ರಾಸ್ತಾವನೆಯೊಂದಿಗೆ ಸ್ವಾಗತಿಸಿದರು. ಪುಷ್ಪರಾಜ್ ಧನ್ಯವಾದ ಹೇಳಿದರು. ಭವ್ಯಶ್ರೀರವರು ಪ್ರಾರ್ಥಿಸಿದರು. ಆನ್‌ಲೈನ್ ಸೇಲ್ಸ್ ಮ್ಯಾನೇಜರ್ ಲತಾ ಯತೀಶ್‌ರವರು ಕಾರ್ಯಕ್ರಮ ನಿರೂಪಿಸಿದರು.

ಸಂಜೀವರವರು ಸಹಕರಿಸಿದರು. ಮುಳಿಯ ಇ-ಕಾಮರ್ಸ್‌ನ ಸೇಲ್ಸ್‌ನ ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು browse.muliya.in ಗೆ login ಆಗಬಹುದು ಮತ್ತು 9353030916, 18004252916 ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave A Reply

Your email address will not be published.