Ad Widget

ನಾಳೆ ಶುಕ್ರವಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 8 ನೆಯ ಕಂತು ರೈತರ ಖಾತೆಗೆ

ಮೇ 14 ಅಕ್ಷಯ ತೃತೀಯ, ಪ್ರಧಾನಿ ನರೇಂದ್ರ ಮೋದಿಯವರು ರೈತರಿಗೆ ಈ ಅವಧಿಯಲ್ಲಿ ಶುಭ ಸುದ್ದಿ ನೀಡಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ (ಪಿಎಂಕೆಎಸ್‌ಎನ್‌ವೈ) 8 ಕಂತು ಬಿಡುಗಡೆಯಾಗಿದ್ದು, ಅದು ಶುಕ್ರವಾರ ಅರ್ಹ ರೈತರ ಖಾತೆ ಸೇರಲಿದೆ.

ಯೋಜನೆಯ ಅಡಿಯಲ್ಲಿ 7ನೇ ಕಂತನ್ನ ಡಿಸೆಂಬರ್ 25, 2020 ರಲ್ಲಿ ಬಿಡುಗಡೆ ಮಾಡಿದ್ದರು. ಇದನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗಿತ್ತು.
ಇದೀಗ 8ನೇ ಕಂತಿನ ಬಿಡುಗಡೆಯಾಗಿದ್ದು, 9.5 ಕೋಟಿಗಿಂತ ಹೆಚ್ಚು ಫಲಾನುಭವಿಗಳ ಖಾತೆಯನ್ನು ಇದು ಸೇರಿಲಿದೆ.

ಒಟ್ಟು 19 ಸಾವಿರ ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಇಷ್ಟೂ ಹಣ ಅರ್ಹರಿಗೆ ಹಂಚಿಕೆಯಾಗಲಿದೆ ಎಂದು ಪ್ರಧಾನಿ ಕಾರ್ಯಾಲಯವು ತಿಳಿಸಿದೆ. ಈ ಮೂಲಕ 2021-22ರ ಆರ್ಥಿಕ ವರ್ಷದ ಪಿಎಂ ಕಿಸಾನ್ ಯೋಜನೆಯ ಮೊದಲ ಕಂತು ರೈತರನ್ನು ಸೇರಲಿದೆ.

Leave a Reply

error: Content is protected !!
Scroll to Top
%d bloggers like this: