ಸುಳ್ಯದಲ್ಲಿ ಅಕ್ರಮ ಬಂದೂಕು ಪ್ರಕರಣ | ಸಮಗ್ರ ತನಿಖೆಗೆ ಎಸ್‌ಡಿಪಿಐ ಆಗ್ರಹ ; ಪ್ರಮುಖ ಆರೋಪಿ ಮನೆಗೆ ಎಸ್ಪಿ ರಿಷಿಕೇಶ್ ಭೇಟಿ

ಸುಬ್ರಹ್ಮಣ್ಯ ಠಾಣೆಯಲ್ಲಿ ದಾಖಲಾದ ನಾಡಕೋವಿ ಪ್ರಕರಣದ ಪ್ರಮಖ ಆರೋಪಿ ದಿವಾಕರ ಆಚಾರ್ಯ ಮನೆಗೆ ಎಸ್.ಪಿ. ರಿಷಿಕೇಶ್ ಸೋನಾವಾಲೆ ಮೇ 12 ರಂದು ಭೇಟಿ ನೀಡಿ ಸ್ಥಳ ತನಿಖೆ ನಡೆಸಿದ್ದಾರೆ.

ಈ ಸಂದರ್ಭ ಸುಳ್ಯದ ಸರ್ಕಲ್ ಇನ್ಸ್ ಪೆಕ್ಟರ್ ನವೀನ್‌ಚಂದ್ರ ಜೋಗಿ, ಸುಬ್ರಹ್ಮಣ್ಯ ಠಾಣೆಯ ಎಸ್ ಐ ಓಮನ ಮತ್ತು ಸುಬ್ರಹ್ಮಣ್ಯ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅಲ್ಲಿ ಗ್ರಾಮದ ಪಾಲ್ತಾಡಿನ ಲೋಹಿತ್ ಬಂಗೇರ ಎಂಬವರನ್ನು ಬಂಧಿಸಿದ್ದಾರೆ. ಅಲ್ಲದೆ ಅವರಲ್ಲಿದ್ದ ಒಂದು ಕೋವಿಯನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಸುಳ್ಯ ಸರ್ಕಲ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬಂದೂಕ ತಯಾರಿಕ ಘಟಕಕ್ಕೆ ದಾಳಿ ನಡೆಸಿ 4 ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ‌ ಪೋಲಿಸರ ಈ ಕಾರ್ಯವೈಖರಿಯನ್ನು ಎಸ್‌ಡಿಪಿಐ ಸ್ವಾಗತಿಸುತ್ತದೆ.
ಅದೇ ರೀತಿಯಲ್ಲಿ ಈ ಒಂದು ಅಕ್ರಮ ಬಂದೂಕು ತಯಾರಿಕೆಯ ಹಿಂದಿನ ಷಡ್ಯಂತರವನ್ನು ಪೋಲಿಸ್ ಇಲಾಖೆ ಬಯಲಿಗೆಳೆಯಬೇಕಿದೆ. ಈ ಆರೋಪಿಗಳು ಬಂದೂಕು ತಯಾರಿಸಿ ಯಾರಿಗೆ ಸಪ್ಲೈ ಮಾಡಲು ಬಯಸಿದ್ದರು, ಹಿಂದೆ ಎಲ್ಲೆಲ್ಲಿ ಪೂರೈಕೆ ಮಾಡಿದ್ದಾರೆ ಎಂಬುದರ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ಬಯಲಿಗೆಳೆಯಬೇಕು ಎಂದು ಎಸ್‌ಡಿಪಿಐ ಆಗ್ರಹಿಸಿದೆ.

ಈ ಹಿಂದೆಯೂ ಜಿಲ್ಲೆಯಲ್ಲಿ ಇಂತಹ ಹಲವಾರು ದುಷ್ಕ್ರತ್ಯಗಳು ನಡೆದಿದ್ದು, ಪುತ್ತೂರು ತಾಲೂಕಿನ ಈಶ್ವರಮಂಗಳದಲ್ಲಿ ಬಾಂಬ್‌ ತಯಾರಿಸುವ ಸಂದರ್ಭ ಸೆರೆ ಸಿಕ್ಕಿರುವುದು ಒಂದು ವಿಷಯ ನಮ್ಮ ಗಮನದಲ್ಲಿದೆ. ಹಿಂದೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿಗಳಿಗೆ ತರಬೇತಿ ಈ ಪರಿಸರದಲ್ಲಿ ನೀಡಲಾಗಿತ್ತು. ಇಂತಹಾ ಕೆಲವು ಘಟನೆಗಳು ನಡೆದಿರುವುದರಿಂದ ಈ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿ ತನಿಖೆ ನಡೆಸಿ ಈ ಪ್ರಕರಣದ ನೈಜತೆಯನ್ನು ಬಯಲಿಗೆಳೆಯಬೇಕೆಂದು ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಬ್ದುಲ್ ಕಲಾಂ ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Leave A Reply

Your email address will not be published.