Ad Widget

ಮಂಗಳವಾರ ಚಂದ್ರದರ್ಶನ ಆಗದ ಹಿನ್ನೆಲೆಯಲ್ಲಿ ನಾಳೆ, ಗುರುವಾರ ‘ಈದ್​ ಉಲ್​ ಫಿತರ್​’ | ದ.ಕ ಜಿಲ್ಲಾ ಖಾಜಿ ಘೋಷಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ, ಅಂದರೆ ಗುರುವಾರದಂದು ಈದ್​- ಉಲ್ – ಫಿತರ್​ ನಡೆಯಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಅಕಾಜ್​ ತ್ವಾಕ್​ ಅಹ್ಮದ್ ಮುಸ್ಲಿಯಾರ್ ಹೇಳಿದ್ದಾರೆ.

ಮಂಗಳವಾರ ಚಂದ್ರದರ್ಶನವಾಗದ ಹಿನ್ನೆಲೆಯಲ್ಲಿ ನಾಳೆ ಗುರುವಾರ ಈದ್​ -ಉಲ್ – ಫಿತರ್​ ನಡೆಯಲಿದೆ.

ನಿನ್ನೆಯೇ ಚಂದ್ರದರ್ಶನವಾಗಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ( ಬುಧವಾರ) ಈದ್​-ಉಲ್ – ಫಿತರ್​ ಆಚರಣೆ ನಡೆಯಬೇಕಿತ್ತು. ದಕ್ಷಿಣ ಕನ್ನಡ ದಲ್ಲಿ ಬುಧವಾರಕ್ಕೆ 30 ದಿನದ ರಂಜಾನ್ ಉಪವಾಸ ಅಂತ್ಯವಾಗುತ್ತದೆ.

ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 29 ದಿನದ ಉಪವಾಸದಂದು ಚಂದ್ರದರ್ಶನವಾಗಿ ಮರುದಿನ ಹಬ್ಬ ಆಚರಣೆ ನಡೆಯುತ್ತದೆ. ಆದರೆ, ಮಂಗಳವಾರ ಚಂದ್ರದರ್ಶನವಾಗದೇ ಇರುವುದರಿಂದ ಗುರುವಾರ ಈದ್​ – ಉಲ್​ – ಫಿತರ್​ ಆಚರಣೆ ನಡೆಯಲಿದೆ ಎಂದು ಮುಸ್ಲಿಯಾರ್ ಅವರು ಹೇಳಿದ್ದಾರೆ.

Leave a Reply

error: Content is protected !!
Scroll to Top
%d bloggers like this: