ದಕ್ಷಿಣ ಕನ್ನಡ | ಲಾಕ್ ಡೌನ್ ನಿಮಿತ್ತ ಮತ್ತೊಂದು ಆದೇಶ ಪ್ರಕಟಿಸಿದ ಜಿಲ್ಲಾಧಿಕಾರಿ
ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ದ.ಕ. ಜಿಲ್ಲಾಡಳಿತ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲಾದ್ಯಂತ ತಂಬಾಕು ಮತ್ತು ಪಾನ್ ಮಸಾಲ (ಬೀಡಿ, ಸಿಗರೇಟ್) ಜರ್ದಾ, ಖೈನಿ ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ.
ಈ ಆದೇಶವನ್ನು ದ.ಕ. ಜಿಲ್ಲಾಧಿಕಾರಿ ಇದೀಗ ಹೊರಡಿಸಿದ್ದಾರೆ.
ಈ ಆದೇಶ ಉಲ್ಲಂಘಿಸಿ ಅವುಗಳನ್ನು ಮಾರಾಟ ಮಾಡಿದರೆ ಅಥವಾ ಬಳಕೆ ಮಾಡಿದರೆ ಸಾಂಕ್ರಾಮಿಕ ರೋಗಗಳ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಒಂದೊಂದಾಗಿ ಕಠಿಣ ನಿಲುವು ತಳೆಯುತ್ತಿರುವ ಜಿಲ್ಲಾಡಳಿತ, ಮುಂದಿನ ಹಂತದಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುತ್ತದೆ ಎನ್ನಲಾಗುತ್ತಿದೆ. ಏಕಾಏಕಿ ಬಂದ್ ಮಾಡುವ ಬದಲು ದಿನ ಬಿಟ್ಟು ದಿನ ಮದ್ಯದಂಗಡಿಗಳನ್ನು ತೆರೆಯಲು ಮಾತ್ರ ಅವಕಾಶ ನೀಡುವ ಸಂಭವವಿದೆ ಎನ್ನಲಾಗಿದೆ. ಮದ್ಯ ಎಸೆನ್ಶಿಯಲ್ ಸರ್ವಿಸ್ ಅಲ್ಲ. ಆದಕಾರಣ ಮದ್ಯದಂಗಡಿಗಳು ಯಾವ ಕಾರಣಕ್ಕೆ ತೆರೆದಿರಬೇಕು, ಮದ್ಯದಂಗಡಿಗಳನ್ನು ಕೂಡ ಮುಚ್ಚಿ ಬಿಡೋಣ ಎಂಬ ನಿಲುವನ್ನು ದಕ್ಷಿಣಕನ್ನಡ ತಳೆಯುತ್ತದೆಯಾ ಎಂಬುದನ್ನು ಕಾದು ನೋಡಬೇಕಾಗಿದೆ.