ಬೆಳ್ತಂಗಡಿ | ಕೋರೋನಾಗೆ ಮತ್ತೊಬ್ಬ ಮಹಿಳೆ ಬಲಿ
ಕೋರೋನಾಗೆ ಬೆಳ್ತಂಗಡಿಯಲ್ಲಿ ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಪಾರ್ಲ ಎಂಬಲ್ಲಿಯ ಸುಮಾರು 60 ವರ್ಷದ ಗುಲಾಬಿ ಇದೀಗ ಮೃತ ಮಹಿಳೆ.
ದೀರ್ಘಕಾಲದ ಡಯಾಬಿಟಿಸ್ ರೋಗಿಯಾಗಿದ್ದ ಅವರು ಇತ್ತೀಚೆಗೆ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದರು. ಕಳೆದ 10 ದಿನಗಳಿಂದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಕಳೆದ ವರ್ಷ ಆಕೆಯ ಪತಿ ಕೋರೋನಾ ಬಾಧಿತರಾಗಿ ತೀರಿಕೊಂಡಿದ್ದರು.