ಡಾಕ್ಟರ್ ಏಪ್ರಾನ್ ಧರಿಸಿ ತರಕಾರಿ ತರಲು ಹೋಗಿ ನಗೆಪಾಟಲಿಗೆ ಈಡಾದ ಯುವಕ !
ವೈದ್ಯರ ಬಿಳಿ ಏಪ್ರಾನ್ ಧರಿಸಿ ತರಕಾರಿ ತರಲು ಹೋಗಿ ವ್ಯಕ್ತಿಯೊಬ್ಬ ನಗೆಪಾಟಲಿಗೆ ಗುರಿಯಾಗಿದ್ದಾನೆ.
ಲಾಕ್ಡೌನ್ ನಿಮಿತ್ತ ಪೊಲೀಸರು ರೌಂಡ್ ಶುರುಮಾಡಿದ್ದರು. ನಿಯಮಾವಳಿಗಳು ಗುಣವಾಗಿ 10.00 ಗಂಟೆಯ ಒಳಗೆ ಎಲ್ಲರೂ ದಿನನಿತ್ಯದ ವಸ್ತುಗಳನ್ನು ತಂದು ಮನೆಯೊಳಗೆ ಸೇರಿ ಕೊಳ್ಳಬೇಕಿತ್ತು. ಹೆಚ್ಚು ಹೊತ್ತು ಹೊರಗಿದ್ದರೆ ಫೈನ್ ನ ಭಯ ಮತ್ತು ಲಾರಿಯ ರುಚಿ ನೋಡಬೇಕಾದ ಅನಿವಾರ್ಯತೆ. ಇದರಿಂದ ತಪ್ಪಿಸಿಕೊಳ್ಳಲು ರಾಜ್ಯಾದ್ಯಂತ ಜನರು ತರಹೇವಾರಿ ಐಡಿಯಾಗಳನ್ನು ಹುಡುಕುತ್ತಿದ್ದಾರೆ.
ನಿನ್ನೆ ಒಬ್ಬ ಪೇಟೆ ಸುತ್ತಲು ಹಾಲಿನ ಕ್ಯಾನ್ ಯಾವಾಗಲೂ ಜೊತೆಗೆ ಒಯ್ಯುವ ಪರಿಪಾಠ ಬೆಳೆಸಿಕೊಂಡಿದ್ದ, ನಂತರ ಸಿಕ್ಕಿಬಿದ್ದಿದ್ದ. ಮತ್ತೆ ಕೆಲವರು ಕೃಷಿ ಕೆಲಸಗಾರರಂತೆ ಸೋಗು ಹಾಕಿ ಪೋಲಿಸರನ್ನು ಯಾಮಾರಿಸುತ್ತಿದ್ದರು. ಇದೀಗ ಉತ್ತರ ಕರ್ನಾಟಕದಲ್ಲಿ ಈ ವ್ಯಕ್ತಿ ಡಾಕ್ಟರ್ ನಂತೆ ಇಸ್ತ್ರಿ ಹಾಕಿದ ಬಿಳಿ ಏಪ್ರಾನ್ ಧರಿಸಿಕೊಂಡು ತರಕಾರಿ ತರಲು ಹೋಗಿದ್ದ. ಆದರೆ ಆತನ ಬಾಡಿ ಲಾಂಗ್ವೇಜ್ ನೋಡಿಯೇ ಪೊಲೀಸರು ಆತನನ್ನು ರಸ್ತೆಯಲ್ಲೇ ಕ್ಯಾಚ್ ಹಾಕಿದ್ದರು.
ವೈದ್ಯರ ಏಪ್ರನ್ ಧರಿಸಿ ತರಕಾರಿ ತರಲು ಹೋಗಿ ಪೊಲೀಸರಿಗೆ ಸಿಕ್ಕಿಬಿದ್ದದ್ದು ಮಾತ್ರವಲ್ಲ,ಆತನ ದ್ವಿಚಕ್ರವಾಹನ ವನ್ನು ಕೂಡ ಜಪ್ತಿ ಮಾಡಲಾಗಿದೆ. ತಮಾಷೆಯ ಸಂಗತಿ ಏನೆಂದರೆ, ಏಪ್ರಾನ್ ಹಾಕಿಕೊಂಡು ಬಂದವನು ತರಕಾರಿ ತಲೆಯ ಮೇಲೆ ಹೊತ್ತುಕೊಂಡು ನಡೆದೇ ಮನೆಗೆ ಹೋಗುವಂತಾಗಿದ್ದು, ಜನ ಆತನ ಪರಿಸ್ಥಿತಿ ಕಂಡು ಎದ್ದು ಬಿದ್ದು ನಗುತ್ತಿದ್ದಾರೆ.