ಎತ್ತ ನೋಡಿದರೂ ಲಾಕ್ ಡೌನ್.ತುರ್ತಾಗಿ ಆಸ್ಪತ್ರೆಗೆ ಹೋಗುವಾಗ ಪೊಲೀಸರಿಂದ ತಡೆಯಾಗಿ ಅಮಾಯಕ ಜೀವ ಬಲಿ..ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಖಾಕಿ. ರಾಜಕಾರಣಿಗಳೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ
ರಾಜ್ಯಾದ್ಯಂತ ಕೊರೋನ ಮರಣ ಮೃದಂಗ ಬಾರಿಸುತ್ತಿದೆ. ಈ ನಡುವೆ ಲಾಕ್ ಡೌನ್ ಜೊತೆಗೆ ಕಟ್ಟು ನಿಟ್ಟಿನ ಕಠಿಣ ಕ್ರಮ. ಸುತ್ತಲಿನಿಂದಲೂ ಪೊಲೀಸ್ ಚೆಕ್ ಪೋಸ್ಟ್. ಅನಾವಶ್ಯಕವಾಗಿ ತಿರುಗಾಡವ ಕನಸು ಕನಸಾಗೇ ಉಳಿಯಲಿ.
ಆದರೆ ಈ ಕರ್ಫ್ಯೂ ಇಂದಾಗಿ ಅಮಾಯಕ ಜೀವವೊಂದು ಬಲಿಯಾಗಿದೆ. ಇದಕ್ಕೆ ಕಾರಣ ಪೊಲೀಸರ ನಿರ್ಲಕ್ಷ್ಯ ಎನ್ನಬಹುದು.ಅನಾರೋಗ್ಯ ಪೀಡಿತೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಕಾರ್ಕಳ ತಾಲೂಕಿನ ಬಜಗೋಳಿ ಚೆಕ್ ಪೋಸ್ಟ್ ಬಳಿ ಪೊಲೀಸರ ನಿರ್ಲಕ್ಷ್ಯದಿಂದ ಅಮಾಯಕ ಜೀವವೊಂದು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಇಹಲೋಕ ತ್ಯಜಿಸಿದೆ.
ವಿಷಯ ಇಷ್ಟೇ. ಪೊಲೀಸರು ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿರುವಾಗ ರೋಗಿಯನ್ನು ಹೊತ್ತ ವಾಹನವನ್ನು ಬಿಡಲಿಲ್ಲ ಎಂಬುದು.ತೀರಾ ತುರ್ತು ಚಿಕಿತ್ಸೆ ಬೇಕಾಗಿದೆ, ಇಲ್ಲವಾದಲ್ಲಿ ಪ್ರಾಣಕ್ಕೆ ಅಪಾಯ ಇದೆ ಎಂದು ಅದೆಷ್ಟು ಅಂಗಲಾಚಿದರೂ ಪೊಲೀಸರ ಮನಸ್ಸು ಕರಗದೆ,108 ಲ್ಲಿ ಕರೆದುಕೊಂಡು ಹೋಗಿ ಎಂಬ ಉತ್ತರವನ್ನಿತ್ತ ಪೊಲೀಸರಿಗೆ ನನ್ನದೊಂದು ಪ್ರಶ್ನೆ. ಹೌದು ನೀವು ನಿಮ್ಮ ಕರ್ತವ್ಯ ಮಾಡುತ್ತೀರಿ.ಆದರೆ ಕೊರೋನ ದಿಂದಾಗಿ ಎಲ್ಲಾ ಆಂಬುಲೆನ್ಸ್ ಗಳು ಸಮಯಕ್ಕೆ ಸರಿಯಾಗಿ ಸಿಗುತ್ತವೆ ಎಂಬುವುದು ನಂಬಲು ಸಾಧ್ಯವಿಲ್ಲ, ಒಂದು ವೇಳೆ ಸಮಯಕ್ಕೆ ಸರಿಯಾಗಿ ಬಾರದೇ ಇದ್ದರೆ ಯಾರು ಹೊಣೆ. ಅಮಾಯಕ ಜೀವಗಳು ಬಲಿಯಾಗುವುದಕ್ಕೆ ಹೊಣೆ ಯಾರು.
ನಿಮ್ಮ ಕುಟುಂಭಸ್ಥರಿಗೆ ಈ ರೀತಿಯಾದರೆ ನಿಮ್ಮ ಮನಸ್ಸು ಹೆಗಾಗಬಹುದು?.ನಿಮ್ಮ ಕಲ್ಲು ಮನಸ್ಸಿಗೆ ಆಕ್ರೋಶಿತ ಕುಟುಂಬಸ್ಥರ ಹಿಡಿ ಶಾಪವಿರಲಿ.ಜಿಲ್ಲಾಧಿಕಾರಿ,ಹಾಗೂ ಪೊಲೀಸ್ ಕಮಿಷನರ್ ಅವರು ಹೇಳಿರುವ ಮಾತನ್ನು ಗಮನಿಸಿರುವಿರಾ?. ಅಗತ್ಯ ಕೆಲಸಕ್ಕೆ ಅದರಲ್ಲೂ ತುರ್ತಾಗಿ ತೆರಳುವ ವಾಹನಗಳನ್ನು ತಡೆಯುವುದಿಲ್ಲ ಎಂಬುವುದು ತಮ್ಮ ಗಮನಕ್ಕೆ ಬಂದಿದೆಯಾ?.ಇದನ್ನು ಮೊದಲು ಮನದಟ್ಟು ಮಾಡಿಕೊಳ್ಳಿ.ಯಾರೋ ಮತಿಗೆಟ್ಟ ಪೇದೆಗಳು ತಮ್ಮ ದರ್ಪ ಮೆರೆಯಲು ಹೋಗಿ ಅಮಾಯಕ ಜೀವ ಇಂದು ಬಲಿಯಾಗಿದೆ. ನಮ್ಮಜಿಲ್ಲೆಯ ಪ್ರಜ್ಞಾವಂತ ರಾಜಕಾರಣಿಗಳೇ, ಇತ್ತ ಕಡೆ ಒಮ್ಮೆ ಗಮನಿಸಿ, ಖಾಕಿ ತಮ್ಮ ದರ್ಪ ಮೆರೆದು ಅಮಾಯಕ ಜೀವಗಳು ಬಲಿಯಾಗುತ್ತಿದೆ, ಅನಗತ್ಯ ತಿರುಗಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಆಸ್ಪತ್ರೆಗೆ, ಮೆಡಿಕಲ್ ಗೆ ತೆರಳುವ ಅಮಾಯಕರ ವಿರುದ್ಧ ಸಮರ ಸಾರುವ ಇಲಾಖೆಯ ಬಗ್ಗೆ ಸ್ವಲ್ಪ ಗಮನವಿಡಿ. ಕರ್ತವ್ಯ ನಿರತರ ನಿರ್ಲಕ್ಷ್ಯದಿಂದಾಗಿ ಸಾವು ಸಂಭವಿಸುತ್ತಿದೆ ಎಂದಾದರೆ ಇನ್ನು ಮನುಕುಲಕ್ಕೆ ಕೊರೋನ ಯಾವ ಲೆಕ್ಕ?.ಆಕ್ರೋಶಿತರು ದಂಗೆ ಏಳುವ ಮೊದಲು ಇತ್ತ ಕಡೆ ಗಮನ ಹರಿಸಿ ಎಂಬುವುದೇ ಎಲ್ಲರ ಆಶಯ.