Ad Widget

7 ಲಕ್ಷ ಖರ್ಚುಮಾಡಿ ಫಾರೈನ್ ಮಾಲ್ ಬೇಕೆಂದು ಥೈಲ್ಯಾಂಡ್ ನಿಂದ ಆಕೆಯನ್ನು ಕರೆಸಿದ್ದ | ಸೆಕ್ಸ್ ಗೆ ಮೊದಲು ಅಲ್ಲಿ ಆಗಿತ್ತು ಫಿಕ್ಸ್ !

ಆ ಪ್ರಸಿದ್ಧ ಉದ್ಯಮಿ ಮಗನಿಗೆ ಫಾರೈನ್ ಹುಡುಗಿಯ ಆಸೆ ಮೂಡಿದೆ. ಸೆಕ್ಸ್ ಕ್ಯಾಪಿಟಲ್ ಎಂದೇ ಕರೆಸಕೊಳ್ಳುತ್ತಿರುವ ಥಾಯ್ಲೆಂಡ್‌ನಿಂದ ಮಸ್ತ್ ಹುಡುಗಿಯನ್ನು ಯಾವುದೋ ಏಜೆಂಟ್ ಮೂಲಕ ಕರೆಸಿಕೊಂಡೂ ಇದ್ದಾನೆ. ಆದರೆ ಆಕೆ ಭಾರತಕ್ಕೆ ಬರುತ್ತಿದ್ದಂತೆ ಊಹಿಸಲಾಗದ ದೊಡ್ಡ ಸಮಸ್ಯೆ ಎದುರಾಗಿದೆ.

ಇತ್ತೀಚಿಗೆ ತೀರಾ ಶೋಕಿಯ ಉದ್ಯಮಿ ಪುತ್ರನೊಬ್ಬ ತುಂಬಾ ಆಸೆಯಿಂದ ಏಜೆಂಟ್ ಮೂಲಕ ಥಾಯ್ಲೆಂಡ್ನಿಂದ ಕಾಲ್ ಗರ್ಲ್ ಒಬ್ಬಳನ್ನು ಕರೆಸಿಕೊಂಡಿದ್ದ. ಅದಕ್ಕಾಗಿ ಆತ ಬರೋಬ್ಬರಿ 7 ಲಕ್ಷ ರೂಪಾಯಿ ಖರ್ಚು ಮಾಡಿದ್ದ. ಅಲ್ಲದೆ ಆಕೆಯ ಫ್ಲೈಟ್ ಟ್ರಾವೆಲ್ ಟಿಕೆಟ್ ಎಲ್ಲವನ್ನೂ ಆತನೇ ನೋಡಿಕೊಂಡಿದ್ದ. ಹೇಗಾದರೂ ಸರಿ, ಎಷ್ಟು ಖರ್ಚಾದರೂ ಸರಿ, ಫಾರಿನ್ ಮಾಲು ಬೇಕು ಎನ್ನುವ ಈ ಗಿರಾಕಿಗೆ ಮಾಲು ಕೂಡ ಸಪ್ಲೈ ಆಗಿದೆ. ವಯ್ಯಾರದ ಬೆಡಗಿ ವಿಮಾನ ನಿಲ್ದಾಣದಲ್ಲಿ ಲಾಂಡ್ ಆಗಿದ್ದಾಳೆ.

ಹಾಗೆ ಆಕೆ ಲಖನೌಗೆ ಏ.28 ರಂದು ಬಂದಿಳಿದ ಆಕೆಯ ಜತೆ ಮಜಾ ಪ್ಲಾನ್ ಇನ್ನೇನು ನಡೆಯಬೇಕಿತ್ತು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ಆಕೆಗೆ ಸಣ್ಣಗೆ ಅನಾರೋಗ್ಯಕಾಡಿದೆ. ಆಕೆಯನ್ನು ಆ ಉದ್ಯಮಿ ಪುತ್ರನೇ ಲೋಹಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಲ್ಲಿ ಆತನಿಗೆ ದೊಡ್ಡ ಶಾಕ್ ಕಾದಿತ್ತು. ಮನಸ್ಸಿನಲ್ಲಿ ಅಪರಿಮಿತ ಸೆಕ್ಸ್ ಬಯಕೆ ಇಟ್ಟುಕೊಂಡ ಆತನಿಗೆ ಆಸ್ಪತ್ರೆಯ ವರದಿ ಆತನ ಮೂಡು ಜರ್ರನೆ ಇಳಿದು ಹೋಗಿತ್ತು.

ಆಸ್ಪತ್ರೆಯಲ್ಲಿ ಕಾಲ್ ಗರ್ಲ್‌ಗೆ ಕೋವಿಡ್ ಪರೀಕ್ಷೆ ಮಾಡಿದ್ದು, ವರದಿ ಪಾಸಿಟಿವ್ ಬಂದಿದೆ. ಆಕೆಯನ್ನು ಕರೆತಂದ ತಪ್ಪಿಗೆ, ಆತನೇ ಆಕೆಯ ಚಿಕಿತ್ಸೆಯ ಜವಾಬ್ದಾರಿ ಹೊತ್ತಿದ್ದಾನೆ.  ಆಕೆ ಮೇ 3 ರಂದು ಚಿಕಿತ್ಸೆ ಫಲಿಸದೆ ಕೊನೆಯುಸಿರೆೆಳೆದಿದ್ದಾಳೆ. ಸೆಕ್ಸ್ ಗೆ ಮೊದಲೇ ಸಾವು ಫಿಕ್ಸ್ ಆಗಿದೆ !

ಇದಕ್ಕೂ ಮುನ್ನ ಈತ ಥಾಯ್ಲೆಂಡ್ ರಾಯಭಾರ ಕಚೇರಿ ಸಂಪರ್ಕಿಸಿ ಕಾಲ್‌ಗರ್ಲ್‌ಗೆ ಕೋವಿಡ್ ಇರುವ ವಿಚಾರ ತಿಳಿಸಿದ್ದ. ಮೃತಳ ಶವವನ್ನ ಆಕೆಯ ಕುಟುಂಬಸ್ಥರಿಗೆ ಹಸ್ತಾಂತರಿಸಲು ಥಾಯ್ಲೆಂಡ್ ರಾಯಭಾರ ಕಚೇರಿಗೆ ಸಂಪರ್ಕಿಸಿದ್ದನಾದರೂ ಆತ ಅದರಲ್ಲಿ ಸಫಲವಾಗಲಿಲ್ಲ. ಕೊನೆಗೆ ಲಖನೌದ ಬೈಕುಂತ್ ಚಿತಾಗಾರದಲ್ಲಿಯೇ ಪೊಲೀಸರ ಜತೆ ಸೇರಿಕೊಂಡು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಇದೀಗ ಕಾಲ್‌ಗರ್ಲ್ ಸಾವಿನ ಪ್ರಕರಣದ ಹಿಂದೆ ಬಿದ್ದ ಪೊಲೀಸರು ತನಿಖೆ ಮುಂದುವರಿಸಿದ್ದು, ಲಖನೌ ರಾಜಧಾನಿಯಲ್ಲಿ ಅಂತಾರಾಷ್ಟ್ರೀಯ ಕಾಲ್ ಗರ್ಲ್ ದಂಧೆ ನಡೆಯುತ್ತಿರುವ ಬಗ್ಗೆ ಶಂಕಿಸಿದ್ದಾರೆ.

Leave a Reply

error: Content is protected !!
Scroll to Top
%d bloggers like this: