ಸೋಮೇಶ್ವರದ ಸೊಂಟ ಬಿದ್ದು ಹೋದ ಅಸಹಾಯಕ ಹುಡುಗನನ್ನು ಕಳೆದ 27 ವರ್ಷಗಳಿಂದ ಸಾಕುತ್ತಿರುವ 71 ವರ್ಷದ ಅಜ್ಜಿಗೆ ಬೇಕಿದೆ ನಿಮ್ಮ ಸಾಂತ್ವನ !
ಸೊಮೇಶ್ವರ ಪಂಚಾಯತ್ ನ ಲಕ್ಷ್ಮಿ ಗುಡ್ಡೆಯಲ್ಲಿ ಬಾಂಧವರೊಬ್ಬರು ನೀಡಿದ ಆಸರೆಯಲ್ಲಿ ಬದುಕುತ್ತಿರುವ ಮುಸ್ಲಿಂ ತಾಯಿ ಮತ್ತು ಮಗನ ದುರಂತ ಬದುಕಿಗೆ ಸಾಂತ್ವನ ಬೇಕಾಗಿದೆೆ.
ಫಾರೂಕ್ ಗೆ ಈಗ ಪ್ರಾಯ 46 ವರ್ಷ. ಒಂದೆರಡಲ್ಲ, ಕಳೆದ 27 ವರ್ಷದಿಂದ ಹಾಸಿಗೆಯಲ್ಲಿ ಮಲಗಿ 71 ವರ್ಷ ಪ್ರಾಯದ ತಾಯಿಯ ಸುಶ್ರೂಷೆಯಲ್ಲಿ ಬದುಕುತ್ತಿರುವ ಈ ವ್ಯಕ್ತಿಯ ಬದುಕು ರಕ್ತ ಕಣ್ಣೀರಿನ ಕಥೆಯಂತೆ ಆಗಿ ಹೋಗಿದೆ.
ತನ್ನ 19 ನೇ ವರ್ಷ ಪ್ರಾಯದಲ್ಲಿ ಫಾರೂಕ್ ಆಳವಾದ ಬಾವಿಗೆ ಬಿದ್ದು ಸೊಂಟ ಮತ್ತು ಕಾಲು ಮುರಿದುಕೊಂಡಿದ್ದ. ಅನಂತರ ತಾಯಿ ಮಗನ ಆರೈಕೆ ಮಾಡಲು ಆರಂಭಿದರು. ನಡೆದಾಡಲು ಪ್ರಯಾಸ ಪಡುವ ಫಾರೂಕ್ ನನ್ನು ತಾಯಿಯೇ ಸ್ನಾನ ಮಾಡಿಸುತ್ತಾರೆ. ತಾಯಿಯೇ ಶೌಚ ಮಾಡಿಸುತ್ತಾರೆ. ಹೆತ್ತ ತಾಯಿಗೆ ಹೆಗ್ಗಣವೇ ಮುದ್ದು ಎನ್ನುವಂತೆ ಮಗನ ಪಾಲಿಗೆ ಈ ಮಹಾತಾಯಿ ಸರ್ವಸ್ವ ತ್ಯಾಗಮಯಿ.
ಇದೀಗ ತಾಯಿಗೂ ವಯಸ್ಸಾಗಿದೆ. ಆತನ ಪಾಲಿಗೆ ಅಮ್ಮನಾಗಿದ್ದ ಆಕೆ ಈಗ ಅಜ್ಜಿಯಾಗಿದ್ದಾಳೆ. ಈಕೆಗೇನೆ ಈಗ ಇನ್ನೊಬ್ಬರ ಆಸರೆ ಬೇಡುವ ವಯಸ್ಸು. ಇಂಥಹ ವಯಸ್ಸಿನಲ್ಲಿ ಈಗ ಈ ಅಸಹಾಯಕ ಮಗನ ಆರೈಕೆ ಮಾಡಬೇಕಾದ ಅನಿವಾರ್ಯತೆ ಈಕೆಯದ್ದು.
ಅಲ್ಲದೆ, ಈ ವೃದ್ದ ಈ ತಾಯಿಯ ಒಬ್ಬಾಕೆ ಮಗಳು ತಲಾಖ್ ಒಳಗಾಗಿ ಎಲ್ಲೋ ದೂರದಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದಾಳೆ. ಆಕೆಗೆ ಇರಲು ಮನೆ ಕೂಡ ಇಲ್ಲ. ಹೀಗೆ ಮನೆಯಿಲ್ಲದ ತಾಯಿ, ಬಾಂಧವರು ನೀಡಿದ ಆಸರೆಯಲ್ಲಿ ತನ್ನ ಮಗನ ಸೇವೆ ಮಾಡುತ್ತಾ ಬದುಕುತ್ತಿದ್ದಾಳೆ.
ಇತ್ತೀಚೆಗೆ ಟೀಂ ಬಿ ಹ್ಯೂಮೆನ್ ತಂಡವು ಅವರ ಸ್ಥಿತಿಯನ್ನು ಅರಿತು ತೆರಳಿದಾಗ ಈ ತಾಯಿ ಮಗನ ದಶಕಗಳ ನೋವಿನ ಬದುಕಿನ ನರಕ ದರ್ಶನ ಪ್ರತ್ಯಕ್ಷವಾಗಿ ಆಯಿತು. ಅವರಿಗೆ ಮನೆಯಲ್ಲಿ ದುಡಿಯುವ ಕೈಗಳಿಲ್ಲ. ವೃದ್ದತಾಯಿ ಬೀಡಿ ಕಟ್ಟಿ ಮಗನನ್ನು ಸಾಕುತ್ತಿದ್ದಾಳೆ. ಆತನ ಮುಖದಲ್ಲಿನ ನಗುವೇ ಈ ತಾಯಿಗೆ ಆಸರೆ. ದೈನಂದಿನ ಖರ್ಚು, ಚಿಕಿತ್ಸೆಗೆ ಹಣ, ಬದುಕಿನ ಸಣ್ಣಪುಟ್ಟ ಬೇಡಿಕೆಗೂ ಇವರಲ್ಲಿ ಕಾಸು ಇಲ್ಲ. ಇಂತಹ ಸ್ಥಿತಿಯಲ್ಲಿ ಈ ಸಂಸಾರಕ್ಕೆ ನಾವು ನೆರವಾಗಬೇಕಾಗಿದೆ.
ನಿಮ್ಮ ಒಂದು ಸಣ್ಣ ನೆರವು ಕೂಡ ಆಕೆ ಮತ್ತು ಆ ಅಸಹಾಯಕ ಹುಡುಗನ ಬದುಕಲ್ಲಿ ದೊಡ್ಡ ನೆಮ್ಮದಿ ಮೂಡಿಸಬಲ್ಲುದು.
ನಿಮ್ಮ ಸಹಾಯಕ್ಕಾಗಿ ಈ ಕೆಳಗಿನವರನ್ನು ಸಂಪರ್ಕಿಸಿಿ.
Abdul Farook
*Ifsc* : SBIN0040739
*A/c No* : 64113526280
*G Pay* : 9980752844
*Contact* : 9980752844