ಮದ್ಯದ ಮಲ್ಲರಿಗೆ ಗುಡ್ ನ್ಯೂಸ್ | ಇನ್ನು ಮದ್ಯವನ್ನು ಸರಕಾರವೇ ಹೋಂ ಡೆಲಿವರಿ ಕೊಡಲಿದೆ !

ಮೇ 10 ರಿಂದ ಲಾಕ್ ಡೌನ್ ಘೋಷಣೆ ಮಾಡಲಾಗಿದೆ‌. ಮದ್ಯದಂಗಡಿಗಳಿಂದ ಸರಕಾರದ ಬೊಕ್ಕಸಕ್ಕೆ ದೊಡ್ಡ ಆದಾಯವನ್ನು ತರುತ್ತಿದೆ. ಈ ಕಾರಣ ಮದ್ಯ ಬಂದ್ಮಾಡುವಂತಿಲ್ಲ. ಈ ಕಾರಣದಿಂದ ಮದ್ಯದ ಆದಾಯವನ್ನು ಹೆಚ್ಚಿಸಿಕೊಳ್ಳಲು ಮದ್ಯಪ್ರಿಯರ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಲು ಸರಕಾರ ಮುಂದಾಗಿದೆ ಎಂದು ಅಬಕಾರಿ ಸಚಿವ ತಿಳಿಸಿದ್ದಾರೆ.

ಆದರೆ ಈ ‘ ಮನೆ ಬಾಗಿಲಿಗೆ ಮದ್ಯದ ಭಾಗ್ಯ ‘ ನೀಡುತ್ತಿರುವುದು ಕರ್ನಾಟಕದಲ್ಲಿ ಅಲ್ಲ. ಛತ್ತೀಸ್ ಗಢದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಅಲ್ಲಿನ ಅಬಕಾರಿ ಮಂತ್ರಿ ಕವಾಸಿ ಲಖ್ಮಾ ಈ ಸಂಬಂಧ ಹೇಳಿಕೆ ನೀಡಿದ್ದಾರೆ.

ಲಾಕ್ ಡೌನ್ ಹೆಸರಿನಲ್ಲಿ ಮದ್ಯದಂಗಡಿಗಳಿಗೆ ಬೀಗ ಹಾಕಿದರೆ ಸರಕಾರದ ಬೊಕ್ಕಸ ಬಕ್ಕ ಬೋರಲು ಬೀಳುತ್ತದೆ. ಈ ಹಿನ್ನೆಲೆಯಲ್ಲಿ ಸರಕಾರ ಹೊಸ ಪ್ಲ್ಯಾನ್ ಗೆ ಮುಂದಾಗಿದೆ. ವೈರಸ್ ಸೋಂಕಿನ ಪ್ರಕರಣಗಳು ಕಡಿಮೆ ಇರುವ ಪ್ರದೇಶಗಳಲ್ಲಿ ಮದ್ಯ ಹೋಂ ಡೆಲಿವರಿಗೆ ಸರ್ಕಾರ ಪ್ರತ್ಯೇಕ ಪೋರ್ಟಲ್ ತೆರೆದಿದೆ.

Leave A Reply

Your email address will not be published.