ಎಣ್ಮೂರು : ಇಲಿ ಪಾಷಾಣ ಸೇವಿಸಿದ್ದ ಮಹಿಳೆ ಮೃತ್ಯು
ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ಕಡಬ ತಾಲೂಕಿನ ಎಣ್ಮೂರಿನ ಮಹಿಳೆಯೊಬ್ಬರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮೇ.5 ರಂದು ನಡೆದಿದೆ.
ಎಣ್ಮೂರು ಗ್ರಾಮದ ಕಟ್ಟ ಕಾಲನಿ ನಿವಾಸಿ ಪ್ರವೀಣ್ ಎಂಬವರ ಪತ್ನಿ ಶ್ವೇತಾ (22ವ.) ಎಂಬವರು ಎ.26 ರಂದು ಮನೆಯಲ್ಲಿ ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.ಅಲ್ಲಿಂದ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೇ.5 ರಂದು ನಿಧನರಾದರು.
ಮೃತರು ಪತಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.