Big Boss | ಎಲ್ಲಾ ಸ್ಪರ್ಧಿಗಳನ್ನು ಏಕಾಏಕಿ ಮನೆಗೆ ಕಳುಹಿಸಲಿರುವ ಬಿಗ್ ಬಾಸ್ | ಯಾರಿಗಾದರೂ ಕಾಡಿತ್ತಾ ಕೊರೋನಾ ?!

ಬಹು ವೀಕ್ಷಿಣೆಯ ಕನ್ನಡ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್-8 ತನ್ನ 71 ದಿನಗಳ ಅಮೋಘ ಜರ್ನಿಯನ್ನು ನಾಳೆಗೆ ಕೊನೆಗೊಳಿಸಲಿದೆ. ಈ ಮೂಲಕ ನೋಡುಗರಿಗೆ ದೊಡ್ಡ ಮಟ್ಟದಲ್ಲಿ ನಿರಾಸೆಯುಂಟು ಮಾಡಿದೆ.

ಕೆಲ ದಿನಗಳ ಹಿಂದೆ ಕಿಚ್ಚ ಸುದೀಪ್ ಗೆ ಕೂಡ ಅನಾರೋಗ್ಯದ ಕಾರಣದಿಂದ ವಾರತ್ಯಂದ ಕಾರ್ಯಕ್ರಮ ನಡೆಸಿ ಕೊಡಲು ಅಸಾಧ್ಯವಾಗಿತ್ತು. ಆದರೆ ಇದೀಗ ಬಿಗ್ ಬಾಸ್ ಅಧಿಕೃತವಾಗಿ ತನ್ನ 8 ನೇ ಆವೃತ್ತಿಯನ್ನು ರದ್ದುಗೊಳಿಸುತ್ತಿರುವ ಬಗ್ಗೆ ಸುದ್ದಿಯನ್ನು ಪ್ರಸಾರ ವಾಹಿನಿಯು ಪ್ರಕಟಿಸಿದೆ.

ಬಿಗ್ ಬಾಸ್ ಮನೆಯೊಳಗಡೆ ಇರುವ ಸ್ಪರ್ಧಿಗಳಿಗೆ ಸದಾ ಕೋವಿಡ್ ವಿಷಯದಲ್ಲೂ ಹೊರಗೆ ನಡೆಯುತ್ತಿರುವ ಸಂಕಷ್ಟ, ಸಂಕಟಗಳು ತಿಳಿಯುತ್ತಿಲ್ಲ.ಸದ್ಯ ಹೊರಗಿನ ಪರಿಸ್ಥಿತಿಯನ್ನು ನೋಡುತ್ತಿದ್ದರೆ ನಿಜಕ್ಕೂ ಮನಸ್ಸಿಗೆ ತುಂಬಾ ಬೇಸರ ಆಗುತ್ತದೆ. ಸ್ಪರ್ಧಿಗಳೀಗ ಐಸೋಲೇಷನ್ ನಲ್ಲಿ ಇರುವುದರಿಂದ ಸುರಕ್ಷಿತವಾಗಿದ್ದಾರೆ. ಅವರನ್ನು ನಾಳೆ ಮನೆಯ ಹೊರಗೆ ಕರೆದು ಸುರಕ್ಷಿತವಾಗಿ ಅವರವರ ಮನೆಗೆ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಯಕ್ರಮ ಪ್ರಸಾರವಾಗುತ್ತಿರುವ ವಾಹಿನಿಯ ಬ್ಯುಸಿ ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ.
ಒಟ್ಟಿನಲ್ಲಿ ಹೇಳುವುದಾದರೆ ಇದೇ ಮೊದಲ ಬಾರಿಗೆ ಕೇವಲ 71 ದಿನಗಳಲ್ಲಿ ಬಿಗ್ ಬಾಸ್ ಮನೆ ಮುಚ್ಚುತ್ತಿದೆ.ಸ್ಪರ್ಧಿಗಳನ್ನು ಸೀಸನ್ ಮುಗಿಯದೇ ಮನೆಗೆ ಕಳುಹಿಸುವ ಸುದ್ದಿ ತಿಳಿದ ವೀಕ್ಷಕರು ನಿರಾಸೆಯಿಂದ ಕಂಗಲಾಗಿದ್ದಾರೆ. ಅದೆಷ್ಟೋ ಮನೋರಂಜನೆ ನೀಡುತ್ತಿದ್ದ ಬಿಗ್ ಬಾಸ್ ನಾಳೆಯಿಂದ ಇರಲ್ಲ ಎಂಬುವುದೇ ವಾಸ್ತವ.

ಅನಾರೋಗ್ಯದ ಕಾರಣ ದಿವ್ಯ ಉರುಡುಗ ಬಿಗ್ ಬಾಸ್ ನಿಂದ ಹೊರಗೆ ಬಂದು ಆಸ್ಪತ್ರೆಗೆ ದಾಖಲಾಗಿದ್ದರು. ಆನಂತರ ಏಕಾಏಕಿ ಬಿಗ್ ಬಾಸ್ ಅನ್ನು ಅಂತ್ಯಗೊಳಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನಿಜಕ್ಕೂ ದಿವ್ಯ ಉರುದುಗ ಅವರಿಗೆ ಕೊರೊನಾ ಸೋಂಕು ತಗುಲಿದೆಯಾ, ಅಥವಾ ಬೇರೆ ಯಾರಿಗಾದರೂ ಸೋಂಕು ತಗುಲಿದೆಯೇ ಎಂಬ ಪ್ರಶ್ನೆ ನೀವು ಉದ್ಭವವಾಗಿದೆ.

Leave A Reply

Your email address will not be published.