ಅಪ್ರಾಪ್ತೆಯನ್ನು ಕರೆದೊಯ್ದು ಕಡಬದ ಲಾಡ್ಜ್ ನಲ್ಲಿ ನಿರಂತರ ಅತ್ಯಾಚಾರ | ಆರೋಪಿ ಏನೆಕಲ್‌ನ ಯುವಕನ ವಿರುದ್ಧ ಪ್ರಕರಣ ದಾಖಲು

Share the Article

ಅಪ್ರಾಪ್ತೆಯೊಬ್ಬಳನ್ನು ಪುಸಲಾಯಿಸಿ ಲಾಡ್ಜ್ ಒಂದರಲ್ಲಿ ನಿರಂತರ ಅತ್ಯಾಚಾರಗೈದ ಪರಿಣಾಮ ಆಕೆ ಗರ್ಭಿಣಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಆರೋಪಿ ಏನೆಕಲ್‌ನ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಏನೆಕಲ್ಲು ನಿವಾಸಿ ಅರುಣ್ ಎಂಬಾತ ಕಳೆದೊಂದು ವರ್ಷದಿಂದ 17 ರ ಹರೆಯದ ಯುವತಿಯನ್ನು ಪುಸಲಾಯಿಸಿ ಕಡಬ ಸಮೀಪದ ಕಳಾರ ಎಂಬಲ್ಲಿನ ಲಾಡ್ಜ್ ವೊಂದರಲ್ಲಿ ಬಲಾತ್ಕಾರದಿಂದ ನಿರಂತರ ಅತ್ಯಾಚಾರ ಎಸಗಿದ್ದು, ಯುವತಿಯ ಹೊಟ್ಟೆಯನ್ನು ನೋಡಿದ ಆಕೆಯ ತಾಯಿಯು ಸಂಶಯಗೊಂಡು ಸುಬ್ರಹ್ಮಣ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಿದಾಗ ಆಕೆ ಆರು ತಿಂಗಳ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ.

ಈ ಬಗ್ಗೆ ಆರೋಪಿ ಅರುಣ್ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ ಸೇರಿದಂತೆ ಪೋಕ್ಸೋ ಕಾಯ್ದೆಯಡಿ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.