ಖ್ಯಾತ ಭಜನಾ ಗಾಯಕ ಕಾರ್ಕಳದ ಸತೀಶ್ ಪೂಜಾರಿ ನಿಧನ

Share the Article

ಉಡುಪಿ: ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನವರಾದ ಪ್ರಸ್ತುತ ಮುಂಬೈಯ ಚೆಂಬೂರಿನ ತಿಲಕ್ ನಗರ ನಿವಾಸಿ, ಖ್ಯಾತ ಭಜನಾ ಗಾಯಕ ಕಾರ್ಕಳದ ಸತೀಶ್ ಪೂಜಾರಿ(41)
ಶುಕ್ರವಾರ ನಿಧನ ಹೊಂದಿದರು.

ಕೆಲಸಮಯದಿಂದ ಅವರು ಅಸೌಖ್ಯದಿಂದ ಬಳಲುತ್ತಿದ್ದರು.

ಮುಂಬೈನ ಚೆಂಬೂರು ತಿಲಕ್ ನಗರ ಪೆಸ್ತಮ್ ಸಾಗರ್ ಕರ್ನಾಟಕ ಸಂಘ ಹಾಗೂ ಬಾಂದ್ರದ ಶ್ರೀ ಧರ್ಮಶಾಸ್ತ ಅಯ್ಯಪ್ಪ ಭಕ್ತವೃಂದದ ಸಕ್ರಿಯ ಸದಸ್ಯರಾಗಿದ್ದ ಸತೀಶ್, ಮುಂಬಯಿ ಮಹಾನಗರದ ಹೆಚ್ಚಿನ ಧಾರ್ಮಿಕ ಕ್ಷೇತ್ರಗಳ ಭಜನೆ- ಸಂಕೀರ್ತನೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು.

ಇವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

Leave A Reply

Your email address will not be published.