ಕಡಬ : ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟಿನ ತಡೆಗೋಡೆ ಕುಸಿತ 10 ವರ್ಷದ ಬಾಲಕನಿಗೆ ಗಾಯ, ಜೀವ ಅಪಾಯದಿಂದ ಅದೃಷ್ಟವಶಾತ್ ಪಾರಾದ ಬಾಲಕ!
ಕಡಬ: ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೂ ಬಾಲಕನೋರ್ವನ ಜೀವಕ್ಕೆ ಅಪಾಯವಾಗುವ ಸಂಭವವಿದ್ದರೂ, ಅದೃಷ್ಟವಶಾತ್ ಬಾಲಕ ಗಾಯಗೊಂಡು ಅಪಾಯದಿಂದ ಪಾರಾದ ಘಟನೆ ಕೋಡಿಂಬಾಳ ಗ್ರಾಮದ ಕುತ್ಯಾಡಿ ಎಂಬಲ್ಲಿ ಮೇ.7ರಂದು ನಡೆದಿದೆ.
ಕುತ್ಯಾಡಿ ಎಂಬಲ್ಲಿ ತೋಡಿಗೆ ನಿರ್ಮಿಸಲಾಗಿದ್ದ ಕಿಂಡಿ ಅಣೆಕಟ್ಟಿನ ತಡೆಗೋಡೆಯನ್ನು ಮುಟ್ಟಿದ್ದ ಕುತ್ಯಾಡಿ ನಿವಾಸಿ ಮೋನಪ್ಪ ಗೌಡ ಎಂಬವರ ಪುತ್ರ ಧನ್ವಿತ್(10ವ.) ಎಂಬವರು ತಡೆಗೋಡೆಯ ಜತೆಗೆ ತೋಡಿಗೆ ಬಿದ್ದಿದ್ದಾನೆ, ಈ ಸಂದರ್ಭದಲ್ಲಿ ಧನ್ವಿತ್ನ ತಲೆ ಹಾಗೂ ಮೈ ಗೆ ಗಾಯವಾಗಿದೆ. ಗಾಯಗೊಂಡ ಬಾಲಕನಿಗೆ ಕಡಬ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಧನ್ವಿತ್ ಹಾಗೂ ಅವನ ತಮ್ಮ ದಕ್ಷಿತ್ ಆಟವಾಡಲೆಂದು ಮನೆಯ ಸಮೀಪವೇ ಇದ್ದ ತೋಟಕ್ಕೆ ಹೋಗಿದ್ದು ಈ ವೇಳೆ ದಾರಿಯಲ್ಲಿ ಇರುವ ಕಿಂಡಿ ಆಣೆಕಟ್ಟಿನ ತಡೆಗೋಡೆಯನ್ನು ಸ್ಪರ್ಶಿಸಿದ್ದು, ಈ ವೇಳೆ ತಡೆಗೋಡೆಯ ಜತೆಗೆ ಧನ್ವಿತ್ ತೋಡಿಗೆ ಬಿದ್ದಿದ್ದಾನೆ, ಈ ಸಂದರ್ಭದಲ್ಲಿ ಸಮೀಪದಲ್ಲಿದ್ದ ಸಹೋದರ ದಕ್ಷಿತ್ ಸಹಾಯಕ್ಕಾಗಿ ಮನೆಯವರನ್ನು ಕೂಗಿ ಕರೆದಿದ್ದಾರೆ, ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಧನ್ವಿತ್ ತಾಯಿ ವಾರಿಜ ಅವರು ತಕ್ಷಣ ಬಂದಿದ್ದರಾದರೂ ಅವರಿಗೆ ತೋಡಿಗೆ ಇಳಿಯಲಾಗದೆ ಇತರನ್ನು ಸಹಯಕ್ಕಾಗಿ ಕರೆದಿದ್ದಾರೆ, ಈ ವೇಳೆ ನೆರೆಮನೆಯ ವ್ಯಕ್ತಿಯೋರ್ವರು ಆಗಮಿಸಿ ತಡೆಗೋಡೆಯ ಅಡಿಯಲ್ಲಿ ಸಿಲುಕಿಕೊಂಡಿದ್ದ ಬಾಲಕನ್ನು ಮೇಲಕ್ಕೆತ್ತಿದ್ದಾರೆ. ಬಳಿಕ ಬಾಲಕನ್ನು ಕಡಬ ಸಮುದಾಯ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ, ಬಾಲಕನಿಗೆ ತಲೆ ಹಾಗೂ ಮೈ ಗೆ ಗಾಯವಾಗಿದೆ.
ಕಳಪೆ ಕಾಮಗಾರಿಯೇ ತಡೆಗೋಡೆ ಕುಸಿಯಲು ಕಾರಣ?
ಕಿಂಡಿ ಆಣೆಕಟ್ಟಿನ ತಡೆಗೋಡೆಯ ಮೇಲೆ ಸಿಮೆಂಟ್ ಇಟ್ಟಿಗೆಯಲ್ಲಿ ಅವೈಜ್ಞಾನಿಕವಾಗಿ ಕಟ್ಟಿರುವುದರಿಂದ ಅದು ಕುಸಿದೆ ಬಿದ್ದಿದೆ. ಉದ್ಯೊಗ ಖಾತರಿ ಯೊಜನೆಯಡಿಯಲ್ಲಿ 3 ಲಕ್ಷ ಅನುದಾನದಲ್ಲಿ ಈ ಕಾಮಗಾರಿಯನ್ನು ನಡೆಸಲಾಗಿದೆ ಎಂದು ತಿಳಿದು ಬಂದಿದೆ.