ಆಲಂಕಾರಿನ ಯುವಕ ಕೋವಿಡ್‌ಗೆ ಬಲಿ | ಕಡಬ ತಾಲೂಕಿನಲ್ಲಿ ಕೋವಿಡ್‌ಗೆ ಮೂವರು ಬಲಿ

 

ಕಡಬ ತಾಲೂಕಿನ ಆಲಂಕಾರು ಗ್ರಾಮದ ಯುವಕನೊಬ್ಬ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ಆಲಂಕಾರು ಗ್ರಾಮದ ನಾಡ್ತಿಲ ಉಮೇಶ ದೇವಾಡಿಗ ರ ಪುತ್ರ ಯತೀಶ್ ಎನ್.ದೇವಾಡಿಗ (32. ವ) ರವರು ಕೊರೋನಾದಿಂದ ಮೃತಪಟ್ಟ ಯುವಕ.

ಮೃತರು ಇಂಜೀನಿಯರ್ ಪದವಿದಾರನಾಗಿದ್ದು ಬೆಂಗಳೂರಿನಲ್ಲಿ ಐ.ಟಿ.ಬಿ.ಟಿ ಇಂಜೀನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಎರಡು ವಾರದ ಹಿಂದೆ ಊರಿಗೆ ಅಗಮಿಸಿದ್ದು .ಅನಾರೋಗ್ಯದಿಂದಾಗಿ ಪುತ್ತೂರಿನ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಅಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು.

ಚಿಕಿತ್ಸೆ ಫಲಕಾರಿಯಾಗದೇ ಮೆ.7 ರಂದು ಕೊವೀಡ್ ನಿಂದಗಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಕಡಬ ತಾಲೂಕಿನಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟ ಮೂರನೇ ಪ್ರಕರಣ ಇದಾಗಿದೆ.

Leave A Reply

Your email address will not be published.