ಅಡ್ಡ ಬಂದ ಬೈಕ್ ಡಿಕ್ಕಿಯಾಗುವುದನ್ನು ತಪ್ಪಿಸಿ,ತನ್ನ ಬೈಕ್‌ನ ನಿಯಂತ್ರಣ ತಪ್ಪಿ ಬೈಕ್ ಸಹಿತ ಹಾರಿ ಬಿದ್ದು ಬೈಕ್ ಸವಾರ ಸಾವು

ಮಂಗಳೂರು: ಅಡ್ಡ ಬಂದ ಸ್ಕೂಟರನ್ನು ತಪ್ಪಿಸಲು ಹೋಗಿ ಬೈಕ್ ಸವಾರ ನಿಯಂತ್ರಣಕ್ಕೆ ಸಿಗದೇ ಪಲ್ಟಿ ಹೊಡೆದ ಘಟನೆ ಮಂಗಳೂರಿನ ಪದವಿನಂಗಡಿಯಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.

 

ಬೋಂದೆಲ್ ಕಡೆಯಿಂದ ಕೆಟಿಎಂ ಬೈಕಿನಲ್ಲಿ ವೇಗವಾಗಿ ಬರುತ್ತಿದ್ದ ಸವಾರ ಪ್ರಶಾಂತ್ ಎಂಬ ಯುವಕ ಅಡ್ಡಲಾಗಿ ಬಂದ ಸ್ಕೂಟರನ್ನು ತಪ್ಪಿಸಲು ಹೋಗಿ ಎರಡು ಪಲ್ಟಿ ಹೊಡೆದಿದ್ದಾನೆ. ಸ್ಕೂಟರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಿ, ಮತ್ತೊಂದು ಬೈಕಿನ ನಡುವೆ ನುಗ್ಗಿ ಬಂದ ಕೆಟಿಎಂ ಬೈಕ್ ಅಂಗಡಿಯೊಂದರ ಮುಂದೆ ಇರಿಸಿದ್ದ ಕೋಲ್ಡ್ ಡ್ರಿಂಕ್ಸ್ ಬಾಟಲಿಗಳ ಬಾಕ್ಸ್ ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ.

ಆಕ್ಸಿಡೆಂಟ್ ನ ವೀಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

https://youtube.com/shorts/bzT8NDw8FYs?feature=share

ಬೈಕ್ ಪಲ್ಟಿಯಾಗಿ ಅಲ್ಲಿಯೇ ರಸ್ತೆಗೆ ಬಿದ್ದರೆ, ಸವಾರ ನೇರವಾಗಿ ಗಾಳಿಯಲ್ಲಿ ಮೇಲ್ಮುಖವಾಗಿ ಉಲ್ಟಾ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದಾನೆ. ಬೈಕ್ ರಸ್ತೆಗೆ ಅಡ್ಡ ಬಿದ್ದ ಪರಿಣಾಮ ಹಿಂಭಾಗದಿಂದ ಬರುತ್ತಿದ್ದ ಮತ್ತೊಂದು ಬೈಕಿನ ಮೇಲೆ ತಾಗಿ ಅದು ಕೂಡ ಉರುಳಿ ಬಿದ್ದಿದೆ. ಅದರಲ್ಲಿದ್ದ ಸವಾರ ಸ್ವಲ್ಪ ಗಾಯಗೊಂಡು ಅಲ್ಲಿಂದ ಎದ್ದು ಹೋಗುವುದು ಸಿಸಿಟಿವಿಯಲ್ಲಿ ದಾಖಲಾಗಿದೆ‌.‌

ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

Leave A Reply

Your email address will not be published.